ಕಲಬುರಗಿ: ಜಿಲ್ಲೆಯ ದಸ್ತಾಪುರ ಗ್ರಾಮದಲ್ಲಿ ಹುನುಮಾನ ಜಯಂತಿ ಅಂಗವಾಗಿ ಲಾಕ್ ಡೌನ್ ಮತ್ತು ಕಲಂ 144 ಉಲ್ಲಂಘಿಸಿ ಪಲ್ಲಕ್ಕಿ ಉತ್ಸವಕ್ಕೆ ಮುಂದಾಗಿರುವ 22 ಜನರ ವಿರುದ್ಧ ಪ್ರಕರಣ ದಾಖಲು ಮಾಡಿರುವ ಘಟನೆ ಇಂದು ಮಹಾಗಾವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ ಅವರು ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿ ಅಂತರ ಕಾಯ್ದುಕೊಳ್ಳಲು ಜಿಲ್ಲಾದ್ಯಂತ ಕಲಂ 144 ಜಾರಿಗೊಳಿಸಿ, ಯಾವುದೇ ಜಾತ್ರೆ, ಸಭೆ, ಮಾರಂಭ ಮತ್ತು ಪ್ರಾರ್ಥನೆಗಳು ನಡೆಸುವುದು ನಿಷೇಧಿಸಲಾಗಿದೆ.
ಜನ ಸೇರ ಬಾರದೆಂದರು ಮುನ್ನೆಚ್ಚರಿಕೆಗಾಗಿ ಲಾಕ್ ಡೌನ್ ಘೋಷಿದ್ದು, ಸುಮಾರು 20 ರಿಂದ 25 ಜನ ದಸ್ತಾಪುರ ಗ್ರಾಮದಲ್ಲಿ ಹನುಮಾನ ಪಲ್ಲಕ್ಕಿ ಉತ್ಸವ ನಡೆಸಲು ಮುಂದಾಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ನಿಯಮ ಉಲ್ಲಂಘನೆಗೆ ಮುಂದಾದ 22 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು. ಜನ ಸೇರ ಬಾರದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳಬೇಕೆಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.