ಲಾಕ್‌ಡೌನ್ ಪಾಲಿಸುವ ಮೂಲಕ ಕೊರೊನಾ ನಿರ್ಮೂಲನೆಗೆ ಮುಂದಾಗಿ: ಎಸ್.ಎಮ್.ಪಾಟೀಲ

0
46

ಸುರಪುರ: ಕೊರೊನಾ ಮಹಾಮಾರಿ ಇಂದು ನಿತ್ಯವು ಜಗತ್ತನ್ನು ನಲುಗಿಸುತ್ತಿದೆ.ಇದಕ್ಕೆ ಯಾವುದೆ ನಿಖರವಾದ ಔಷಧ ಇಲ್ಲವಾದರು ಎಲ್ಲರು ತಮ್ಮ ಮನೆಗಳಲ್ಲಿರುವ ಮೂಲಕ ಇದರ ನಿರ್ಮೂಲನೆಗೆ ಸಹಕರಿಸಬಹುದಾಗಿದೆ ಎಂದು ಆರಕ್ಷಕ ನಿರೀಕ್ಷಕ ಎಸ್.ಎಮ್.ಪಾಟೀಲ ಮಾತನಾಡಿದರು.

ನಗರದ ರಂಗಂಪೇಟೆಯಲ್ಲಿ ಉದ್ಯಮಿ ಸಯ್ಯದ್ ಮಹಿಮೂದ್ ಅಜಬ್ ವತಿಯಿಂದ ಹಮ್ಮಿಕೊಂಡಿದ್ದ ಬಡ ಜನತೆಗೆ ಆಹಾರ ಸಾಮಾಗ್ರಿಗಳು ಮತ್ತು ತರಕಾರಿ ಮತ್ತಿತರೆ ಅಗತ್ಯ ವಸ್ತುಗಳ ವಿತರಿಸಿ ಮಾತನಾಡಿ,ಇಂದು ಅನೇಕ ಸಂಘ ಸಂಸ್ಥೆಗಳು ಬಡವರು ನಿರ್ಗತಿಕರ ಮತ್ತು ಮಾನಸಿಕ ಅಸ್ವಸ್ಥರ ನೆರವಿಗೆ ನಿಂತು ನಿತ್ಯವು ಆಹಾರ ನೀರು ಮತ್ತು ದಿನಸಿ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.ಅದರಂತೆ ತಾವುಗಳೂ ಇಂದು ಜನತೆಗೆ ಆಹಾರ ಸಾಮಾಗ್ರಿಗಳ ವಿತರಿಸುವ ಮೂಲಕ ನೆರವಿಗೆ ನಿಂತಿರುವುದು ಉತ್ತಮವಾದ ಕಾರ್ಯವಾಗಿದೆ ಎಂದರು.

Contact Your\'s Advertisement; 9902492681

ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೂಗುರೇಶ ವಾರದ ಮಾತನಾಡಿ,ದೇಶದಲ್ಲಿನ ಎಲ್ಲಾ ಬಡ ಜನರ ಜೊತೆಗೆ ಪ್ರಜ್ಞಾವಂತ ಜನತೆ ನಿಲ್ಲುವ ಮೂಲಕ ಮಾನವೀಯತೆ ತೋರಬೇಕಿದೆ.ಬಡವರು ನಿರ್ಗತಿಕರಿಗೆ ಆಹಾರ ಧಾನ್ಯಗಳು ಮತ್ತು ಔಷಧಿ ಮತ್ತಿತರೆ ಅವಶ್ಯಕತೆಗಳನ್ನು ನೀಗಿಸಲು ಶ್ರಮಿಸೋಣ ಎಂದರು.

ಇದೇ ಸಂದರ್ಭದಲ್ಲಿ ಸಯ್ಯದ್ ಮಹಿಮೂದ್ ಅಜಬ್ ಷೇರ್ ಅವರಿಂದ ಅನೇಕ ಬಡ ಕುಟುಂಬದ ಜನತೆಗೆ ಆಹಾರ ಸಾಮಾಗ್ರಿಗಳಾದ ಅಕ್ಕಿ ಬೇಳೆ ಅಡುಗೆ ಎಣ್ಣೆ ಮತ್ತು ತರಕಾರಿ ಕಿಟ್‌ಗಳನ್ನು ನೀಡುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಬಸವರಾಜ ವಾರದ್,ದಾನಪ್ಪ ಲಕ್ಷ್ಮೀಪುರ,ಸತೀಶ್ ನಾಯಕ,ಗುಲಾಮ್ ರಸೂಲ್,ಮಹಾಂತೇಶ ಮಡಿವಾಳ,ಮಂಜುನಾಥ ಸ್ವಾಮಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here