ಕೊರೊನಾ ಎಫೆಕ್ಟ್: ಕ್ರೈಸ್ ಬಾಂಧವರಿಂದ ಸರಳ ರೀತಿಯಲ್ಲಿ ಈಸ್ಟರ್ ಸಂಡೆ ಆಚರಣೆ

0
32

ಸುರಪುರ: ಕ್ರಿಶ್ಚಿಯನ್ ಸಮುದಾಯದವ ಅತ್ಯಂತ ಪವಿತ್ರ ಹಬ್ಬವಾದ ಶುಭ ಶುಕ್ರವಾರ (ಗುಡ್ ಫ್ರೈಡೆ) ಹಾಗೂ ರವಿವಾರದಂದು ಯೇಸುಕ್ರಿಸ್ತರ ಪುನರುತ್ಥಾನ ದಿನಾಚರಣೆ (ಈಸ್ಟರ್ ಸಂಡೇ) ಗಳನ್ನು ಕೋರೋನಾ ವೈರಸ್ ಸೋಂಕು ತಡೆಯಲು ಲಾಕಡೌನ್ ನಿಮಿತ್ತ ತಮ್ಮ ತಮ್ಮ ಮನೆಗಳಲ್ಲಿ ಅತ್ಯಂತ ಸರಳವಾಗಿ ಆಚರಿಸಿದರು.

ಕೋರೊನಾ ವೈರಸ್ ಸೋಂಕು ಹರಡದಂತೆ ಸರಕಾರ ಲಾಕಡೌನ್ ಜಾರಿಗೊಳಿಸಿ ಸಾಮೂಹಿಕ ಪ್ರಾರ್ಥನೆ ಕೈಗೊಳ್ಳದಂತೆ ನಿಷೇಧಿಸಿರುವದರಿಂದ ಸಮಾಜದ ಧರ್ಮ ಗುರುಗಳು ಕೂಡಾ ಚರ್ಚಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸದೇ ತಮ್ಮ ತಮ್ಮ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಆದೇಶ ಹೊರಡಿಸಿದ್ದರು.

Contact Your\'s Advertisement; 9902492681

ಬಿಷಪ್ ಎನ್.ಎಲ್.ಕರ್ಕರೆ ಬೆಂಗಳೂರು ಅವರು ಅವರು ವಿಡಿಯೋ ಕಾನಫೆರೆನ್ಸ್ ಮೂಲಕ ಸಮಾಜದ ಬಾಂಧವರಿಗೆ ಸಂದೇಶವನ್ನು ನೀಡಿದರು, ಯೇಸುಕ್ರಿಸ್ತರು ಹೇಳಿರುವಂತೆ ಶಾಂತಿಯನ್ನು ನಿಮಗೆ ಬಿಟ್ಟು ಹೋಗುತ್ತೇನೆ ನನ್ನಲಿರುವಂತಹ ಶಾಂತಿಯನ್ನು ನಿಮಗೆ ಕೊಡುತ್ತೇನೆ ಲೋಕವು ಕೊಡುವ ರೀತಿಯಿಂದ ನಾನು ನಿಮಗೆ ಕೊಡುವದಿಲ್ಲ ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ ಎಂದು ಈಸ್ಟರ್ ಸಂದೇಶವನ್ನು ನೀಡಿದರು, ಇಡೀ ಜಗತ್ತನ್ನು ಕೋರೋನಾ ವೈರಸ್ ಸೋಂಕಿನ ಭೀತಿಯನ್ನು ಎದುರಿಸುತ್ತಿದ್ದು ಈ ಭೀತಿಯನ್ನು ಹೋಗಲಾಡಿಸಲು ಎಲ್ಲರೂ ಪ್ರಾರ್ಥನೆ ಸಲ್ಲಿಸೋಣ ಎಂದು ಹೇಳಿದರು.

ನಗರದ ಸಾಮ್ಯುವೇಲ್ ಮ್ಯಾಥ್ಯೂ ಶಿಕ್ಷಕರು ಸೇರಿದಂತೆ ಕ್ರಿಶ್ಚಿಯನ್ ಸಮಾಜದ ಬಾಂಧವರ ಮನೆಗಳಲ್ಲಿ ಯೇಸುಕ್ರಿಸ್ತರ ಪುನರುತ್ಥಾನ ದಿನವನ್ನು ಕಾಂಡಲ್ ದೀಪಗಳನ್ನು ಬೆಳಗಿಸಿ ಆರಾಧನೆ ಹಾಡುಗಳು, ನಂತರ ಬೈಬಲ್ ಪಾರಾಯಣ ಮತ್ತು ಪ್ರಾರ್ಥನೆ ಸಲ್ಲಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here