ಕಲಬುರಗಿ: ದೇಶದಲ್ಲಿ ಮಹಾಮಾರಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಕಲಬುರಗಿ ಜಿಲ್ಲೆಯಲ್ಲಿ ಕೋವಿಡ್-19 ನಿಂದ ಇದು ವರೆಗೆ ಮೂರು ಜನರ ಮೃತಪಟ್ಟಿದ್ದ ಬೆನ್ನೆಲೆ ಇಂದು ಮತ್ತೆ ಮೂರು ಮಂದಿಗೆ ಸೋಂಕು ತಗಲಿರುವ ಬಗ್ಗೆ ವೈದ್ಯಕೀಯ ವರದಿ ದೃಢ ಪಡಿಸಿದೆ.
ಕಲಬುರಗಿಯಲ್ಲಿ 10 ವರ್ಷದ ಬಾಲಕಿ, 35 ವರ್ಷದ ಮಹಿಳೆಗೆ ಮತ್ತು 51 ವರ್ಷದ ವೃದ್ಧನಿಗೆ ಕೊರೋನಾ ವೈರಸ್ ತಗುಲಿರುವುದು ದೃಢ ಪಟ್ಟಿದ್ದು, 10 ಮತ್ತು 35 ವರ್ಷದ ಮಹಿಳೆಗೆ ರೋಗಿ ಸಂಖ್ಯೆ P177 ಜೊತೆ ಸಂಪರ್ಕದಿಂದ ವೈರಸ್ ತಗುಲಿದೆ ಎಂದು ತಿಳಿದುಬಂದಿದ್ದು, ರೋಗ್ಯಿ ಸಂಖ್ಯೆ P205 ಸಹೋದರಾರದ 51 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ ಎಂದು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಪೀಡಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ ಮೂರು ಮತ್ತು ಚಿಕಿತ್ಸೆಯಿಂದ ಗುಣಮುಖರಾದ ಇಬ್ಬರಾಗಿದ್ದಾರೆ. ಪೀಡಿತ ರೋಗಿಗಳಿಗೆ ಇ.ಎಸ್.ಐ.ಸಿ ಆಸ್ಪತ್ರೆಯ ಐಸೊಲೇಶನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 11 ಹೊಸ #Covid19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 258ಕ್ಕೆ ಏರಿದೆ. ಇದುವರೆಗೆ 65 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. #IndiaFightsCornona pic.twitter.com/IDK3NY8bbI
— B Sriramulu (@sriramulubjp) April 14, 2020
ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ದಿನೇ ದಿನೇ ಏರಿಕೆ ಜಿಲ್ಲೆಯನ್ನು ಬೆಚ್ಚಿ ಬಿಳಿಸುತ್ತಿದ್ದು, ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.