ಶಹಾಬಾದ: ಕೊರೊನಾ ಸೊಂಕು ನಿಯಂತ್ರಣಕ್ಕೆ ಪೂರಕವಾಗಿ ನಗರದ ಕೆನರಾ ಬ್ಯಾಂಕ್ ಶಾಖೆ ಸಂಚಾರಿ ಎಟಿಎಂ ಸೇವೆ ನೀಡುವ ಮೂಲಕ ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತಿದೆ.
ಈಗಾಗಲೇ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಹಣಮಂತರಾವ ದೇಗಾಂವ್ ಸಲಹೆ ಮೇರೆಗೆ ಸಂಚಾರಿ ಎಟಿಎಂ ಸೇವೆ ಆರಂಭಿಸಲಾಗಿದ್ದು, ಆಟೋಗಳ ಮೂಲಕ ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ತಲಾ ಒಂದೊಂದು ಸಂಚಾರಿ ಎಟಿಎಂ ಸೇವೆ ಕಳಿಸಲಾಗಿದೆ. ಈ ಸೇವೆ ಮೂಲಕ ಗ್ರಾಹಕರು ತಮ್ಮ ಜನಧನ ಖಾತೆಗೆ ಕೇಂದ್ರ ಸರಕಾರ ಪಾವತಿಸಿರುವ 500 ರೂ. ಪಡೆದುಕೊಳ್ಳು ಅನುಕೂಲ ಮಾಡಿಕೊಡಲಾಗಿದೆ. ಹೀಗೆ ಹಣ ಪಡೆದುಕೊಳ್ಳಲು ಪಾಸ್ ಬುಕ್ ಇರಲೆಬೇಕೆಂಬ ನಿಯಮವಿಲ್ಲ.ಕೇವಲ ಖಾತೆದಾರರು ತಮ್ಮ ಆಧಾರ ಕಾರ್ಡ ತೋರಿಸಿ ಹಣ ಪಡೆಯಬಹುದು ಎಂದು ತಿಳಿಸಿದರು.
ಇನ್ನೊಂದೆಡೆ ಖಾತೆದಾರರು ತಮ್ಮ ಖಾತೆಯಿಂದ ನಿತ್ಯ 20 ಸಾವಿರ ರೂ. ಹಣ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ತಮ್ಮ ಹಣವನ್ನು ಸಹ ಡಿಪಾಸಿಟ್ ಮಾಡಬಹುದಾಗಿದೆ. ಇಡೀ ದೇಶದ ಜನರು ಸಂಕಷ್ಟದಲ್ಲಿರುವುದರಿಂದ ಜನರು ಲಾಕ್‍ಡೌನ್ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳಿಗೆ ಬರಲು ಆಗದಿರುವುದರಿಂದ ಮತ್ತು ಬ್ಯಾಂಕುಗಳಲ್ಲಿ ಜನಸಂದಣಿಯಾಗದಿರುವುದಕ್ಕೆ ಈ ಕ್ರಮ ಕೈಗೊಂಡಿದ್ದೆವೆ. ಅಲ್ಲದೇ ಸಂಚಾರಿ ಎಟಿಎಂ ನೀವಿರುವ ಸ್ಥಳಕ್ಕೆ ಬಂದಾಗ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು ಬ್ಯಾಂಕಿನ್ ಸಿಬ್ಬಂದಿಗಳಿಗೆ ಸಹಕರಿಸಿ ಎಂದು ಮಾಹಿತಿ ನೀಡಿದ್ದಾರೆ.