ಪ್ರಕೃತಿಯ ಮುಂದೆ ಮನುಷ್ಯನಾಟ ನಡೆಯುವುದಿಲ್ಲ

0
62

ವಿಶ್ವದಾದ್ಯಂತ ಕೋವಿಡ್-೯೦ ರೋಗ ಹರಡಿದ್ದು, ಈ ರೋಗದಿಂದ ಮುಕ್ತಿ ಪಡೆಯಲು ಎಲ್ಲ ದೇಶಗಳು ಹರಸಾಹಸಪಡುತ್ತಿವೆ. ಈ ಹಿಂದೆ ಇಂತಹ ಹಲವಾರು ಮಾರಕ ರೋಗಗಳಿಂದ ಜನರು ಸಾಕಷ್ಟು ಸಂಕಷ್ಟ, ತೊಂದರೆ ಅನುಭವಿಸಿದ್ದಾರೆ. ಆಧುನಿಕ ಜೀವನ ಶೈಲಿಗೆ ಕೊರೊನಾ ಹೊಸದಾಗಿದ್ದು, ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಈ ರೋಗ ತೀರಾ ಮಾರಕವಾಗಿ ಪರಿಣಮಿಸಿದೆ.

ಪ್ರಕೃತಿ ತನ್ನ ಸಮತೋಲನ ಕಾಯ್ದುಕೊಳ್ಳುತ್ತದೆ ಎನ್ನುವುದಕ್ಕೆ ಇಂತಹ ಮಾರಕ ರೋಗಗಳೇ ಸಾಕ್ಷಿಯಾಗಿದ್ದು, ಜನಸಂಖ್ಯೆ ಹೆಚ್ಚಾಗಿರುವ ಭಾರತದಂತಹ ಈ ದೇಶದಲ್ಲಿ ಇದನ್ನು ತಡೆಗಟ್ಟಲು ಎಲ್ಲರೂ ಹೋರಾಡಬೇಕಿದೆ. ಇಂತಹ ಮಹಾಮಾರಿ ಕೊರೊನಾ ಸಾಕಷ್ಟು ಪಾಠ ಕಲಿಸಿದೆ ಎಂದು ಹೇಳಬಹುದು. ಕೊರೊನಾದಿಂದ ಪ್ರಕೃತಿ, ಪರಿಸರ ರಕ್ಷಣೆಯಾಗಿದೆ. ಮನೆಯೇ ಮಂತ್ರಾಲಯ ಎಂಬ ಮಹತ್ವ ತಿಳಿಸಿಕೊಟ್ಟಿದೆ.

Contact Your\'s Advertisement; 9902492681

ಒಬ್ಬರಿಗೊಬ್ಬರೂ ಪರಸ್ಪರ ಸುಖ-ದುಃಖ ಹಂಚಿಕೊಳ್ಳುವುದನ್ನು ಕಲಿಸಿದೆ. ವಿಜ್ಞಾನದ ಮೂಲಕ ಏನೆಲ್ಲ ಸಾಧನೆ ಮಾಡಿದ್ದರೂ ಪ್ರಕೃತಿಯ ಮುಂದೆ ಮನುಷ್ಯರ ಆಟ ಏನೂ ನಡೆಯುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ಆರೋಗ್ಯ ರಕ್ಷಣೆ, ಶುಚಿತ್ವದ ಬಗ್ಗೆ ಪಾಠ ಕಲಿಸಿದೆ. ಕೊರೊನಾ ರೋಗದಿಂದ ದೇಶ-ವಿದೇಶದ ಆರೋಗ್ಯ, ಆರ್ಥಿಕ ಸ್ಥಿತಿಗತಿ ಏನಿದೆ ಎಂಬುದು ಗೊತ್ತಾಗುತ್ತಿದೆ. ಕೊರೊನಾ ರೋಗದಿಂದ ಮನುಷ್ಯರಲ್ಲಿ ಮನೆ ಮಾಡಿದ್ದ ಹಲವು ಮೂಢನಂಬಿಕೆಗಳು ಮಾಯವಾಗಿವೆ ಎನ್ನಬಹುದು.
ಕೊರೊನಾ ವಾರಿಯರ್ಸ್ ಗಳ ನಿಸ್ವಾರ್ಥ ಸೇವೆಯನ್ನು ಮನಗಾಣಿಸಿ ಅವರ ಬಗ್ಗೆ ಹೆಮ್ಮೆ, ಅಭಿಮಾನ ಮೂಡುವಂತಾಯಿತು.

ಒಂದೇ ಮನೆಯಲ್ಲಿದ್ದರೂ ಎಲ್ಲರೂ ಪರಸ್ಪರ, ಪ್ರೀತಿ-ವಿಶ್ವಾಸದಿಂದ ಹೇಗೆ ಬಾಳಿ ಬದುಕಬೇಕು ಎಂಬುದನ್ನು ತಿಳಿಸಿಕೊಟ್ಟಿತು. ಮಹಿಳೆಯರ ಕಷ್ಟ-ನಷ್ಟಗಳೇನು? ಅವರ ಬೇಕು-ಬೇಡಗಳೇನು ಎಂಬುದನ್ನು ಪುರುಷರಿಗೆ ಮನವರಿಕೆ ಮಾಡಿಕೊಟ್ಟಿತು. ಈ ಮೊದಲು ವಿದೇಶ ಸುತ್ತಾಟ ಎಂದರೆ ಅದೊಂದು ಹೆಮ್ಮೆ ಅನಿಸುತ್ತಿತ್ತು. ಆದರೆ ಇದೀಗ ನಮ್ಮೂರೇ ನಮಗೆ ಮೇಲು ಎನ್ನವುಂತಾಗಿದೆ. ಮಾನವ ಜನಾಂಗ ಒಂದೇ ಕೊರೊನಾ ವೈರಸ್ ಮಧ್ಯೆ ಕೋಮು ವೈರಸ್ ಹರಡುವುದು ಬೇಡ, ಎಲ್ಲರ ಜೀವ, ಪ್ರಾಣ ರಕ್ಷಣೆ ಮುಖ್ಯ ಎಂಬಿತ್ಯಾದಿ ಅಂಶಗಳು ಕೊರೊನಾ ವೈರಸ್ ನಮ್ಮೆಲ್ಲರಿಗೆ ಎಚ್ಚರಿಸಿತು, ತಿಳಿಸಿಕೊಟ್ಟಿತು ಎಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ.


-ಶಿವಲೀಲಾ ಕಲಗುರ್ಕಿ, ಶಿಕ್ಷಕಿ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here