ಕಂಟೋನ್ಮೆಂಟ್ ಝೋನ್ ವಾರ್ಡ್‌ಗಳ ಮನೆ ಬಾಗಿಲಿಗೆ ಬೇಕಾದ ವಸ್ತು ತಲುಪಿಸುವೆವು: ಜೀವನ್ ಕಟ್ಟಿಮನಿ

0
32

ಸುರಪುರ: ಕೊರೊನಾ ಸೊಂಕಿನಿಂದ ಜನರನ್ನು ರಕ್ಷಿಸಲು ಜಿಲ್ಲಾಧಿಕಾರಿಗಳ ಆದೇಶದಂತೆ ನಗರದ ಎಲ್ಲಾ ವಾರ್ಡುಗಳು ಧಾರಕ ವಲಯ ಎಂದು ಘೋಷಣೆಯಾಗಿದ್ದರಿಂದ ಪ್ರಾಯೋಗಿಕವಾಗಿ ಆರು ವಾರ್ಡುಗಳು ಕಂಟೋನ್ಮೆಂಟ್ ಝೋನ್‌ಗಳಾಗಿಸಿ ಕಾರ್ಯಾರಂಭ ಮಾಡಿದ್ದು ಇಂದಿನಿಂದ ಕಂಟೋನ್ಮೆಂಟ್ ಝೋನ್ ವಾರ್ಡಿನ ಜನತೆ ಬೇಕಾದ ಅಗತ್ಯ ವಸ್ತುಗಳಿಗಾಗಿ ಕರೆ ಮಾಡಿ ತಿಳಿಸಿದರೆ ಅವರ ಮನೆ ಬಾಗಿಲಿಗೆ ಬೇಕಾದ ವಸ್ತು ತಲುಪಿಸುವ ಕೆಲಸ ಆರಂಭಿಸಿರುವುದಾಗಿ ನಗರಸಭೆ ಕಮಿಷನರ್ ಜೀವನ್ ಕುಮಾರ ಕಟ್ಟಿಮನಿ ತಿಳಿಸಿದರು.

ಇಂದು ನಗರಸಭೆ ಬಳಿಯಲ್ಲಿ ವಸ್ತು ಸಾಗಣೆ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ,ಕಂಟೋನ್ಮೆಂಟ್ ಝೋನ್ ಜನತೆಯ ಮನೆ ಮನೆಗೆ ನಮ್ಮ ನಗರಸಭೆ ಸಿಬ್ಬಂದಿಯ ದೂರವಾಣಿ ಸಂಖ್ಯೆ ತಲುಪಿಸುತ್ತಿದ್ದು ಬೆಳಿಗ್ಗೆ ೭ ರಿಂದ ೧೧ ಗಂಟೆ ವರೆಗೆ ಕರೆ ಮಾಡಿ ತಮಗೆ ಬೇಕಾದ ವಸ್ತುಗಳಾ ದಿನಸಿ,ಹಾಲು,ಹಣ್ಣು,ತರಕಾರಿ ಬಗ್ಗೆ ತಿಳಿಸಿದಲ್ಲಿ ನಮ್ಮ ವಾಹನದ ಮೂಲಕ ಯಾವುದೇ ಶುಲ್ಕವಿಲ್ಲದೆ ತಲುಪಿಸುತ್ತೇವೆ.

Contact Your\'s Advertisement; 9902492681

ವಸ್ತುವಿನ ದರ ನೀಡಿ ಪಡೆಯಬಹುದು ಎಂದರು.ಸದ್ಯ ಇಂದು ಆರು ವಾರ್ಡುಗಳಿಗೆ ನಾಲ್ಕು ವಾಹನಗಳ ಮೂಲಕ ವಸ್ತು ಸಾಗಿಸುತ್ತಿದ್ದು ಧಾರಕ ವಲಯ ನಿರ್ಮಾಣದ ಸಂಖ್ಯೆ ಹೆಚ್ಚಿಸಿದಂತೆಲ್ಲ ವಾಹನಗಳನ್ನು ಹೆಚ್ಚಿಸುಲಾಗುವುದು. ಆದ್ದರಿಂದ ಜನತೆ ಮನೆಯಿಂದ ಹೊರಗೆ ಬರದೆ ಮನೆಯಲ್ಲಿದ್ದು ಕೊರೊನಾ ಸೊಂಕಿನಿಂದ ದೂರ ಉಳಿಯುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪರಿಸರ ಅಭಿಯಂತರ ಸುನೀಲ ನಾಯಕ,ಹಿರಿಯ ಆರೋಗ್ಯ ನಿರೀಕ್ಷಕ ಲಕ್ಷ್ಮಣ ಕಟ್ಟಿಮನಿ,ಸಿಎಒ ಓಂಕಾರಪ್ಪ ಪೂಜಾರಿ,ಕಾರ್ಮಿಕರಾದ ಜಗದೀಶ ಶಾಖನವರ್, ಅನೀಲ್,ಪರಶುರಾಮ,ಶಾಂತಕುಮಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here