ಶಹಾಪುರ: ಕೊರೋನಾ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ರೈತ ಬೆಳೆದ ತರಕಾರಿಗಳನ್ನು ಖರೀದಿಸಿ ನಿರ್ಗತಿಕರಿಗೆ,ಬಡವರಿಗೆ,ಕೂಲಿ ಕಾರ್ಮಿಕರಿಗೆ ಹಂಚಿದ ಶ್ರೀ ಅಮ್ಮ ಚಾರಿಟೆಬಲ್ ಟ್ರಸ್ಟಿನ ಅಧ್ಯಕ್ಷರಾದ ಗುರು ಮಣಿಕಂಠನ್ ಅವರು ಇಂದು ರೈತರಿಗೆ ಆಸರೆಯಾದರು.
ಪ್ರಗತಿಪರ ರೈತ ಯಲ್ಲಪ್ಪ ಹಾಲಬಾವಿ ಬೆಳೆದ ಉಳ್ಳಾಗಡ್ಡೆ, ಸೌತೆಕಾಯಿ,ಬದನೆಕಾಯಿ, ಮೆಣಸಿನಕಾಯಿ,ಸೊಪ್ಪು, ಟೊಮೆಟೊ ತರಕಾರಿಯನ್ನು ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾರೂ ಖರೀದಿಸದೆ ಮಾರುಕಟ್ಟೆಗೆ ತರಲಾಗದೆ ತುಂಬಾ ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿರುವಾಗ ಗುರು ಮಣಿಕಂಠ ಅವರೇ ನೇರವಾಗಿ ತೋಟಕ್ಕೆ ಹೋಗಿತರಕಾರಿ ಖರೀದಿಸಿ ೧೫೦ ಕ್ಕೂ ಹೆಚ್ಚು ಕಿಟ್ ಬಡವರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಅರವಿಂದ ಉಪ್ಪಿನ್,ರಾಜು ಆನೆಗುಂದಿ, ವಿಶ್ವಾರಾಧ್ಯ ಪಾಲ್ಕಿ,ಸಿದ್ದು ಆನೆಗುಂದಿ,ಪ್ರದೀಪ್ ಶಿರವಾಳ ಮಾಂತಗೌಡ ಶಿರವಾಳ ವಿಜಯ್ ಸ್ವಾಮಿ ಹಳೇಪೇಟೆ ಹಾಗೂ ಇತರರು ಹಾಜರಿದ್ದರು.