ಶಹಾಪುರದ ವಾರ್ಡ್ 8 ಪ್ರಾಯೋಗಿಕವಾಗಿ ಕಂಟೈನ್ಮೆಂಟ್ ಜೋನ್: ನಗರಸಭೆ ಆಯುಕ್ತ ಬಸವರಾಜ ಶಿವಪೂಜೆ

0
2588

ಶಹಾಪುರ: ಕೋರೋನಾ ಕೊವೀಡ -19 ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗೃತ ಕ್ರಮವಾಗಿ ಶಹಾಪುರದ ವಾರ್ಡ್ 8 ಪ್ರಾಯೋಗಿಕವಾಗಿ ಕಂಟೈನ್ಮೆಂಟ್ ಜೋನ್ ನ್ನಾಗಿ ಮಾಡಲಾಗಿದೆ ಎಂದು ನಗರಸಭೆ ಆಯುಕ್ತರಾದ ಬಸವರಾಜ ಶಿವಪೂಜೆ ತಿಳಿಸಿದರು.

ಒಟ್ಟು 31 ವಾರ್ಡಗಳಲ್ಲಿ ಈಗಾಗಲೇ 20 ವಾರ್ಡುಗಳನ್ನು ಕಂಟೈನ್ಮೆಂಟ್ ಜೊನ್ ಗಳನ್ನಾಗಿ ಮಾಡುವ ಆಲೋಚನೆಯಲ್ಲಿದ್ದೇವೆ ಸದ್ಯ ಪ್ರಾಯೋಗಿಕವಾಗಿ ವಾರ್ಡ್ 8 ಕಂಟೈನ್ಮೆಂಟ್ ಜೋನ್ ಆಗಿ ಮಾಡಿದ್ದೇವೆ.ಈ ವಾರ್ಡಿನ ಎಲ್ಲ ಮಾರ್ಗಗಳು ಬಂದ್ ಮಾಡಿ ಚರಬಸವೇಶ್ವರ ಮುಖ್ಯ ದ್ವಾರ ಒಂದೇ ದಾರಿಯನ್ನು ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ.ಅಲ್ಲದೆ ಮುಂಬರುವ ದಿನಗಳಲ್ಲೂ ಕೂಡ 20 ವಾರ್ಡ್ಗಳಿಗೂ ಕಂಟೈನ್ಮೆಂಟ್ ಜೋನ್ ಮಾಡಬೇಕೆಂಬ ಉದ್ದೇಶದಿಂದ ಮುಂಜಾಗೃತ ಕ್ರಮವಾಗಿ ಮ್ಯಾಪ್ಗಳನ್ನು ತಯಾರಿಸಲಾಗಿದೆ.

Contact Your\'s Advertisement; 9902492681

ಸುಮಾರು 50 ಕ್ಕೂ ಹೆಚ್ಚು ಕಿರಣಾ ಅಂಗಡಿಗಳು,ಮೆಡಿಕಲ್ ಶಾಪ್ಗಳು, ಹಾಲು ಹಾಗೂ ತರಕಾರಿ ಮಾರುವವರ ಫೋನ್ ನಂಬರ್ ಗಳನ್ನು ಕಲೆಕ್ಟ್ ಮಾಡಲಾಗುತ್ತಿದೆ.ಅವರ ಎಲ್ಲಾ ನಂಬರ್ಗಳನ್ನು ಮನೆ ಮನೆಗೆ ತಿಳಿಸಲಾಗುತ್ತದೆ ಆ ನಂಬರ್ಗೆ ಕರೆ ಮಾಡಿದರೆ ಬೇಕಾದ ದಿನಸಿ ವಸ್ತುಗಳು ಡೋರ್ ಡೆಲಿವರಿ ಕೊಡಲಾಗುತ್ತದೆ.

ಬೆಳಿಗ್ಗೆ 6 ರಿಂದ 10:30 ರವರೆಗೆ ಬೇಕಾದ ಅಗತ್ಯ ದಿನಿಸಿ ವಸ್ತುಗಳನ್ನು ಡೋರ್ ಡೆಲೆವರಿ ಮಾಡಲಾಗುವುದು ಆದ್ದರಿಂದ ಈ ವಾರ್ಡಿನ ಪ್ರತಿಯೊಬ್ಬರೂ ಯಾವುದೇ ಕಾರಣಕ್ಕೂ ಹೊರಗಡೆ ಬರಕೂಡದು ಎಂದು ತಾಕೀತು ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here