ರಾವೂರ ರಥೋತ್ಸವ ಪ್ರಕರಣದಲ್ಲಿ ಅಮಾಯಕರ ಬಲಿಪಶು: ಪ್ರಭಾವಿಗಳ ರಕ್ಷಣೆ

0
616

ವಾಡಿ: ಸರಕಾರದ ನಿಯಮ ಮೀರಿ ರಾವೂರ ಶ್ರೀಸಿದ್ಧಲಿಂಗೇಶ್ವರ ರಥೋತ್ಸವ ಜರುಗಿದ ವಿಷಯಕ್ಕೆ ಸಂಬಂಧಪಟ್ಟಂತೆ ಹಲವರ ಮೇಲೆ ಕೇಸ್ ದಾಖಲಾಗಿದೆ. ಅದರಲ್ಲಿ ಪ್ರಭಾವಿಗಳ ಹೆಸರುಗಳನ್ನು ಕೈಬಿಟ್ಟು ಅಮಾಯಕರನ್ನು ಜೈಲಿಗಟ್ಟುವ ಮೂಲಕ ಬಲಿಪಶು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಏಪ್ರಿಲ್ ೧೬ರಂದು ನಡೆಯುವ ರಥೋತ್ಸವ ರದ್ದು ಪಡೆಸುವುದಾಗಿ ಮುಂಚಿತವಾಗಿಯೇ ಪೋಲಿಸ್ ಇಲಾಖೆಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟು ನಂತರ ರಥೋತ್ಸವ ನಡೆಸಿರುವ ರಾವೂರ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಆಡಳಿತ ಮಂಡಳಿ ಸದಸ್ಯರು, ಕೇಂದ್ರ ಸರಕಾರದ ನಿಯಮ ಉಲ್ಲಂಘಿಸಿದ್ದಾರೆ. ಮಠದ ಆಡಳಿತ ಮಂಡಳಿಗೆ ಸೇರಿದ ಹಾಗೂ ಗ್ರಾಮದ ಪ್ರಭಾವಿ ವ್ಯಕ್ತಿಗಳನ್ನು ಕೈಬಿಟ್ಟು ಮಠದಲ್ಲಿ ಅತ್ಯಂತ ಸಾಧಾರಣ ಕೇಲಸದಲ್ಲಿದ್ದ ಕಾರ್ಮಿಕರ ಮೇಲೆ ನ್ಯಾಯಾಂಗದ ತೂಗು ಕತ್ತಿ ಛಳಪಿಸಲಾಗಿದೆ.

Contact Your\'s Advertisement; 9902492681

ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ೨೦ ಜನರನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಅದರಲ್ಲಿ ರಥೋತ್ಸವ ಜರುಗಿಸುವ ಕುರಿತು ತಿರ್ಮಾನ ಕೈಗೊಂಡ ಆಡಳಿತ ಮಂಡಳಿಯ ಬಹುತೇಕ ಪ್ರಮುಖ ನಾಯಕರನ್ನು ಹಾಗೂ ಮಠದ ಉಸ್ತೂವಾರಿಗಳನ್ನು ಕಾನೂನಿನ ಕುಣಿಕೆಯಿಂದ ಬಚಾವ್ ಮಾಡಲಾಗಿದೆ. ಬದಲಿಗೆ ಮಠದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಬಡಪಾಯಿ ಕೂಲಿ ಕಾರ್ಮಿಕರನ್ನು ಕಾನೂನಿನ ಉರಳಿಗೆ ತಳ್ಳಲಾಗಿದೆ.

ಹೊಟ್ಟೆಪಾಡಿಗೆ ಮಠದಲ್ಲಿ ಸ್ವಚ್ಚತೆ, ಅಡುಗೆ ತಯಾರಿಕೆ ಅಂಥಹ ಕೆಲಸ ಮಾಡಿಕೊಂಡಿದ್ದ ಹತ್ತಾರು ಜನ ಕಾರ್ಮಿಕರು ಆಡಳಿತ ಮಂಡಳಿಯ ತಪ್ಪು ತೀರ್ಮಾನದಿಂದಾಗಿ ಜೈಲು ಪಾಲಾಗಿದ್ದಾರೆ. ಇದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಪೊಲೀಸರು ಯಾವ ಆದಾರದ ಮೇಲೆ ತಪಿತಸ್ಥರಲ್ಲದವರ ಮೇಲೆ ಕ್ರಮಕೈಗೊಂಡರು? ಎನ್ನುವುದೆ ಯಕ್ಷ ಪ್ರಶ್ನೆಯಾಗಿದೆ. ರಾಜಕೀಯ ಬಲದಿಂದ ಪ್ರಭಾವಿಗಳು ರಕ್ಷಣೆಯಾಗಿದ್ದು, ಅಮಾಯಕ ಮಠದ ಸೇವಕರನ್ನು ಬಲಿಪಶು ಮಾಡಲಾಗಿದೆ. ಇದು ಕುಟುಂಬ ಸದಸ್ಯರನ್ನು ಆತಂಕಕ್ಕೆ ನೂಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here