ಕರೋನಾ ರೋಗ ಹರಡದಂತೆ ಕಟ್ಟು ನಿಟ್ಟಿನ ಕ್ರಮ: ಸುರೇಶ ವರ್ಮಾ

0
131

ಶಹಾಬಾದ: ನಗರದಲ್ಲಿ ಕರೋನಾ ರೋಗ ಹರಡದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ತಾಲೂಕಾಢಳಿತ ನಿರ್ಧರಿಸಿದೆ ಎಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದ್ದಾರೆ.

ನಗರದಲ್ಲಿ ಸುಮಾರು ಹತ್ತಾರು ದಿನಗಳ ಹಿಂದಷ್ಟೇ ಇಬ್ಬರಿಗೆ ಕರೊನಾ ಸೊಂಕು ತಗುಲಿತ್ತು. ಶನಿವಾರ ೧೬ ವರ್ಷದ ಯುವಕನಿಗೆ ಸೊಂಕು ದೃಢಪಟ್ಟಿದ್ದರಿಂದ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೆವೆ. ಮುಂಜಾಗೃತವಾಗಿ ಕ್ರಮವಾಗಿ ನಗರದಲ್ಲಿ ಕಿರಾಣಾ ಪದಾರ್ಥಗಳನ್ನು ಖರೀದಿಸುವವರು ಅಂಗಡಿಗೆ ನಡೆದುಕೊಂಡು ಒಬ್ಬರೇ ಬರಬೇಕು. ಬೈಕ್, ವಾಹನವನ್ನು ತರಲು ಅವಕಾಶವಿಲ್ಲ. ಅದನ್ನು ತಮ್ಮ ಏರಿಯಾದ ಸಮೀಪದ ಕಿರಾಣಾ ಅಂಗಡಿಯಲ್ಲೇ ಖರಿದಿಸತಕ್ಕದ್ದು.

Contact Your\'s Advertisement; 9902492681

ಅದನ್ನು ಬಿಟ್ಟು ಬಜಾರ ಬರುವುದಕ್ಕೆ ನಿರ್ಬಂಧಿಸಲಾಗಿದೆ. ಒಂದು ವೇಳೆ ನಿಯಮವನ್ನು ಗಾಳಿಗೆ ತೂರಿ ಬೈಕ್ ತಂದರೆ ಸೀಜ್ ಮಾಡಲಾಗುವುದು. ಆನಸಂದಣಿ ತಡೆಯಲು ಕಿರಾಣಾ ಅಂಗಡಿಗಳಿಗೆ ಬೆಳಿಗ್ಗೆ ೫ರಿಂದ ೧೨ರವರೆಗೆ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ. ಅಂಗಡಿಗಳಲ್ಲಿ ೬೦ ವರ್ಷದ ಮೇಲ್ಪಟ್ಟ ವ್ಯಕ್ತಿಗಳು ಇರಕೂಡದು.ಅಲ್ಲದೇ ಅಂಗಡಿಯವರು ಒಬ್ಬ ವ್ಯಕ್ತಿ ಅಂಗಡಿ ಮುಂದೆ ಸಾಮಾಜಿಕ ಅಂತರ ಕಾಪಾಡಲು ನಿಯೋಜಿಸಬೇಕು.

ಒಂದು ವೇಳೆ ಸಾಮಾಜಿಕ ಅಂತರ ಕಾಪಾಡದಿದ್ದರೇ ಅಂತ ಅಂಗಡಿಯವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆರೋಗ್ಯದ ಸಮಸ್ಯೆ ಇದ್ದರೇ ಮಾತ್ರ ಬೈಕ್ ಮೇಲೆ ರೋಗಿಗಳನ್ನು ತರಬಹುದು.ಅದನ್ನು ಬಿಟ್ಟು ಅನಾವಶ್ಯಕವಾಗಿ ತಿರುಗಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳು ನಿರ್ಧರಿಸಿದ್ದೆ.ಅಲ್ಲದೇ  ತರಕಾರಿ ಮಾರುಕಟ್ಟೆ ಸೋಮವಾರ ವ್ಯಾಪಾರ ಇರುವುದಿಲ್ಲ. ಅದನ್ನು ಬಿವಿಎನ್ ಮೈದಾನಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುತ್ತಿದ್ದೆವೆ ಎಂದು ಎಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here