ರವಿವಾರ ನಡೆಯಬೇಕಿದ್ದ ಸಂತೆ ಮತ್ತು ಕಿರಾಣಾ ವ್ಯಾಪಾರವನ್ನು ನಡೆಸದಂತೆ ಕ್ರಮ

0
214

ಶಹಾಬಾದ: ನಗರದಲ್ಲಿ ಶನಿವಾರ ೧೬ ವರ್ಷದ ಯುವಕನಲ್ಲಿ ಕರೊನಾ ವೈರಸ್ ಕಂಡು ಬಂದಿದ್ದರಿಂದ
ಮುಂಜಾಗೃತ ಕ್ರಮವಾಗಿ ರವಿವಾರ ನಡೆಯಬೇಕಿದ್ದ ಸಂತೆ ಮತ್ತು ಕಿರಾಣಾ ವ್ಯಾಪಾರವನ್ನು ನಡೆಸದಂತೆ ತಹಸೀಲ್ದಾರ ಸುರೇಶ ವರ್ಮಾ ಹಾಗೂ ಪಿಐ ಅಮರೇಶ.ಬಿ ಕಟ್ಟಿನಿಟ್ಟಿನ ಕ್ರಮಕೈಗೊಂಡರು.

ಈಗಾಗಲೇ ನಗರದಲ್ಲಿ ಎರಡು ಪ್ರಕರಣಗಳು ಕಂಡು ಬಂದಿತ್ತು. ಈಗ ಮೂರನೇ ಪ್ರಕರಣ ಕಂಡುಬಂದಿದ್ದರಿಂದ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ತಾಲೂಕಾಢಳಿತ ರವಿವಾರ ಸಂತೆ ಇರುವ ಕಾರಣ ಜನರು ಸಾಮಾಜಿಕ ಅಂತರ ಕಾಪಾಡುವಲ್ಲಿ ಹಿಂದೇಟು ಹಾಕುತ್ತಿರುವ ಕಾರಣ ಕರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮವಾಗಿ ಸಂತೆ ಹಾಗೂ ವ್ಯಾಪಾರವನ್ನು ರದ್ದುಪಡಿಸಲಾಗಿತ್ತು.

Contact Your\'s Advertisement; 9902492681

ಬೆಳಿಗ್ಗೆ ೬ ಗಂಟೆಗೆ ತಹಸೀಲ್ದಾರ ಸುರೇಶ ವರ್ಮಾ ಹಾಗೂ ಪಿಐ ಅಮರೇಶ.ಬಿ ಹಾಗೂ ಸಿಬ್ಬಂದಿ ವರ್ಗವದರು ಲಾಠಿ ಹಿಡಿದು ಅನಾವಶ್ಯವಾಗಿ ಬಂದ ಜನರನ್ನು ಮನೆಗೆ ತೆರಳುವಂತೆ ಮಾಡಿದರು.ಯಾವುದೇ ಕಾರಣಕ್ಕೂ ಜನರು ಮನೆಯಿಂದ ಬರಬೇಡಿ. ಒಂದು ವೇಳೆ ಅನಾವಶ್ಯಕವಾಗಿ ಬಂದರೆ ಲಾಠಿ ರುಚಿ ತೋರಿಸಬೇಕಾಗುತ್ತದೆ.ಅಲ್ಲದೇ ಇದೇ ಸಂದರ್ಭದಲ್ಲಿ ಸುಮಾರು ೧೫ ಬೈಕ್‌ಗಳನ್ನು ಸೀಜ್ ಮಾಡಲಾಯಿತು.

ಸುಮಾರು ದಿನಗಳಿಂದ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗಿದೆ.ಸಭೆ ನಡೆಸಲಾಗಿದೆ. ಸಾರ್ವಜನಿಕರಿಗೆ ಇದರ ತೀವ್ರತೆ ಬಗ್ಗೆ ತಿಳಿಹೇಳಲಾಗಿದ್ದರೂ, ಕೆಲವು ಜನರು ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ.ಆದ್ದರಿಂದ ಬೆಳಿಗ್ಗೆಯೇ ಕಾರ್ಯಚರಣೆಗೆ ಇಳಿದ ತಹಸೀಲ್ದಾರ ,ಪೊಲೀಸ್ ಅಧಿಕಾರಿಗಳು ನಗರದ ಎಲ್ಲಾ ಮುಖ್ಯ ರಸ್ತೆಗಳಲ್ಲಿ ತೆರಳಿ ಜನರಿಗೆ ಬಿಸಿ ಮುಟ್ಟಿಸಿದ್ದಾರೆ. ರವಿವಾರ ಜನರು ಸೇರದಂತೆ ಸಂತೆ ವ್ಯಾಪಾರವನ್ನು ರದ್ದುಪಡಿಸಿ ಕಟ್ಟುನಿಟಿನ ಕ್ರಮ ಕೈಗೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here