ಮನೆಯಲ್ಲೆ ಬಸವ ಜಯಂತಿ ಆಚರಿಸಿ: ಡಾ. ವಿಲಾಸವತಿ ಖೂಬಾ

0
64

ಕಲಬುರಗಿ: ತಮಗೆಲ್ಲ ತಿಳಿದಿರುವಂತೆ ಮುಂಬರುವ ರವಿವಾರ  ಏಪ್ರಿಲ್ 26 ರಂದು ಬಸವ ಜಯಂತಿ. ಈ ಹಿನ್ನೆಲೆಯಲ್ಲಿ ಬಸವ ಭಕ್ತರು ಕೋವಿಡ್-೧೯, ರಾಷ್ಟ್ರೀಯ ದಿಗ್ಬಂಧನವನ್ನು ಅನುಲಕ್ಷಿಸಿ ಬಸವ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸದಂತೆ ಎಚ್ಚರಿಕೆವಹಿಸಬೇಕಾಗಿದೆ. ರಾಷ್ಟ್ರದ  ಪ್ರಜೆಗಳಾದ ನಾವೆಲ್ಲ ಇಂತಹ ಸಂದರ್ಭದಲ್ಲಿ ಜವಾಬ್ದಾರಿಯಿಂದ ವರ್ತಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದುದರಿಂದ ಎಲ್ಲ ಬಸವಾಭಿಮಾನಿಗಳು ಈ ವರ್ಷ ಸಾರ್ವಜನಿಕವಾಗಿ ಅದ್ದೂರಿಯಿಂದ ಬಸವ ಜಯಂತಿಯನ್ನು ಆಚರಿಸದೆ, ತಮ್ಮ ತಮ್ಮ ಮನೆಗಳಲ್ಲಿಯೇ ಬಸವಣ್ಣನವರ   ಭಾವಚಿತ್ರವನ್ನು ಇಟ್ಟು, ಮನೆಯ ಬಾಂಧವರೆಲ್ಲರೂ ದೈಹಿಕ ಅಂತರವನ್ನು ಕಾಪಾಡಿಕೊಂಡು, ಒಟ್ಟಾಗಿ ಬಸವಾದಿ ಶರಣರ ವಚನಗಳನ್ನು ಪಠಿಸುವ ಮೂಲಕ ಭಕ್ತಿಭಾವದಿಂದ ಬಸವ ಜಯಂತಿ ಆಚರಿಸಬೇಕೆಂದು ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಮನವಿ ಮಾಡಿದ್ದಾರೆ.

26, ರಂದು,  ಸಂಜೆ 7 ಗಂಟೆಗೆ, ವಿಶ್ವಗುರು ಬಸವೇಶ್ವರರ ಜಯಂತಿ ಆಚರಣೆಯ ಅಂಗವಾಗಿ ವಿಡಿಯೋ ಕಾನ್ಫರೆನ್ಸ್‌ನ  ನೇರ ಪ್ರಸಾರದ ಜಾಗತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಜಾಗತಿಕ ಕಾರ್ಯಕ್ರಮದ ಉದ್ಘಾಟಣೆಯನ್ನು ಸಾಂಕೇತಿಕವಾಗಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಉಪಮುಖ್ಯ ಮಂತ್ರಿಗಳಾದ ಗೊವಿಂದ ಕಾರಜೋಳನವರು ನೆರೆವೆರಿಸಲಿದ್ದಾರೆ. ಕೊರೋನಾ ಹಾವಳಿಯ ಮುಕ್ತಿಗಾಗಿ ಪ್ರಮುಖ ನಾಯಕರು, ಜಗದ್ಗುರುಗಳು, ಸ್ವಾಮೀಜಿಗಳು ಮತ್ತು ಪ್ರಖ್ಯಾತ ವಿದ್ವಾಂಸರು ಈ ನೇರ ಜಾಗತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಾತನಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here