ನಿಮಗೊಂದು ಸೆಲ್ಯೂಟ್

0
65
ನೀನು ಜೀವಿಯಲ್ಲ ಜೀವಿಯಂತೆ ಬೆಳೆಯುತ್ತಿರುವೆ. ಸಿಂಹವಂತೂ ಮೊದಲೇ ಅಲ್ಲ, ಅದಕ್ಕಿಂತ ಹೆಚ್ಚು ಹೆದರಿರುವರು ,ನೀ ವೈರಸ್ಎಂದು ತಿಳಿದರೂ ನಿನ್ನ ಅಟ್ಟಹಾಸಕ್ಕೆ ಪ್ರಾಣಭಯದಲಿ ಮನೆಬಂಧಿಯಾಗಿಹರು , ಅಲ್ಲಿಯೂ ಹೆದರಿಕೆ ನಮ್ಮೂರಿಗೆ ಯಾರಾದರು ಬಂದರೆ ನಾವೆಲ್ಲ ಬಂಧಿಯೆಂದು. _೧_
ಗಡಿಯಲ್ಲಿ ನಾಡಲ್ಲಿ ಊರಲ್ಲಿ ಕೇರಿಯಲ್ಲಿ ಮನೆಯಲ್ಲಿ ,ಮನದಲ್ಲಿ ನಿನ್ನ ಜಪವೇ , ಹೀಗಾಗಿ ನಿನ್ನ ಹೆಸರು ಉಸಿರದೇ,ಉಸಿರು ಹಿ ಡಿಯುವೇ. ನಿನ್ನ ತಾಯ್ನಾಡು ಚೀನಾ ,ಹೇಗಿದೆ ? ಹೆತ್ತವರಿಗೂ ಸುತ್ತಿದೆ, ನಿನ್ನ ಕಾಣದವರನ್ನೂ ಸುತ್ತಿದೇ ಜಗವೆಲ್ಲ ನಿನ್ನ ನಾಮ ಕೋವಿಡ್_19, ನೀ ಹೆಮ್ಮಾರಿಯೇ ,?ಜಗವು ನೀ ಸುತ್ತಿದರು , ಭಾರತ ಮಾತೆಗೆ ಕರಿನೆರಳು ಸುತ್ತಿ, ನಾವು ಹೆದರಿದೇವು. __೨__
ನಾವು ಬಂಧು ಬಾಂಧವರ ಹೆತ್ತವರ ಸೋದರ ಸಂಬಂಧದ, ಹೀಗೆ ನಾನಾ ಸಂಬಂಧದಲ್ಲಿ ಕಳ್ಳ ಹರಿದು ಬದುಕುವ ನಾವುಗಳು, ನಿನಗಂಜಿ ನಾವೆಲ್ಲ ದೂರವಾಗಿದ್ದು ನಿಜ. ಗಂಟೆಗೊಮ್ಮೆ ಕೈ ತೊಳೆದು, ಕೊರೊನವೆಂದು ಹೆದರಿ ಸೋಷಿಯಲ್ ಡಿಸ್ವನ್ಸ್ ಬಳಸುತ್ತಿದ್ದೆವಲ್ಲ, ಮೈ ಮನ ಮನೆ ಸುತ್ತಲೂ ಸ್ವಚ್ಚತೆ ಯ ಸೂತ್ರ ತಿಳಿಸಿ ಬಿಸಿಬಸಿಯ ಆಹಾರವೇ ನಮಗಾಗಿ, ಕೆಟ್ಟದಾಡಿದ ಬಾಯಿಗೆ ಮುಸುಕು ಹಾಕಿರುವೆ, ಚುಗುಲಿ ಮಾತಾಡಬಹುದೇ ಈ ಬಾಯಿಂದ? ಕೆಟ್ಟದನ್ನೂ ನೋಡುತ್ತಿರುವ ಈ ಕಣ್ಣುಗಳಿಗೆ  ಸ್ವಚ್ಚವಿರುವಂತೆ ಮಾಡಿದೆ ಕೈಯಂತೂ ಯಾವುದಕ್ಕೂ ಮುಟ್ಟಿದರು ಸ್ಯಾನ್ನಿಟೈಜರ್ ಬಿಟ್ಟು ಬದುಕುತ್ತಿಲ್ಲ. __೩__
ಕರೋನ ಪ್ರೇಮಿಗಳಿಗೆ ದೂರ ಮಾಡಿದೆ. ತವರಿಗೆ ಹೋದ ಹೆಂಡತಿ ಅಲ್ಲಿಯೇ ಉಳಿದಳು. ಗಂಡನ ಪಾಡೇನು ಊಟವಿಲ್ಲದೇ! ಯಾರು ಎಲ್ಲಿದ್ದಾರೋ ಅಲ್ಲಿಯೇ ಉಳಿದರು ನಿನಗಾಗಿ. __೪__
ಕರೋನ ನಿನ್ನ ಅಟ್ಟಹಾಸದಿ ಸತ್ತವರು ಅನಾಥರೆ ಸರಿ ಅವರೆಲ್ಲ ನಿನ್ನ ಸಂಸ್ಕಾರದಿ ಬರದೆ 108ವ್ಯಾನ್ ನಂಬರಿನ ಸಿಬ್ಬಂಧಿಗೆ ನಿನ್ನ ಸಂಸ್ಕಾರ ಮಾಡಿಹರು ,ಸಂಸಾರ ನಂಬಿ ಏನೆಲ್ಲ ಮಾಡಿದವರಿಗೆ ಇಂದು ಪಾಠಕಲಿಸಿದಂತೆ ಆಗಿದೆ , ಮುಂದೆಂದು ಜನರು ದಾರಿ ಬಿಟ್ಟು ನಡೆಯುವುದಿಲ್ಲ ನಿನ್ನ ಭಯದಿಂದ, ಆದರೆ ನೀ ಎಂದು ನಮ್ಮ ಬಳಿ ಬರಲೇಬೇಡ.
ಬಂದರೂ ಬಿಡುವುದಿಲ್ಲ ನಮ್ಮ ಜನಮೆಚ್ಚಿದ ಅಧಿಕಾರಿ ಬಿ.ಶರತ್ ಅವರು, ಇವರನ್ನೆ ನಂಬಿ ಕಲಬುರ್ಗಿ ನೆಮ್ಮದಿಯ ಉಸಿರು ಬಿಡುತ್ತಿದೆ, ಹೊರಬರುತ್ತಿಲ್ಲ ಮಾರ್ಕೇಟ್ ಮಾಡುತ್ತಿಲ್ಲ, ಬೈಕು ನಡೆಸುತ್ತಿಲ್ಲ ಕಾನೂನಿಗೆ ಬದ್ಧರಾಗಿ, ಅಧಿಕಾರಿಯ ಜೊತೆ ಭಾಗಿಆದರಲ್ಲ , ನೀ ಬರಲಾರೆ ಕರೋನ, ಬಾಯ್ ಬಾಯ್ ಹೇಳುವೆ ನಿನಗೆ ಭಾರತದೆ, ನಿನ್ನ ತೆರವಿಗೆ ಮೋದಿಯವರ ಶಕ್ತಿಗೆ ಓಡಿ ಹೋಗುವೆ. ನಮ್ಮ ಸಮೂಹ ಮಾಧ್ಯಮಗಳ ಹಗಲಿರುಳು ದುಡಿಮೆಗೆ, ವೈದ್ಯರು ಜೀವತೊರೆದು ನಿನ್ನ ಓಡಿಸಲು ಪಣತೊಟ್ಟರು, ದೇಶವೇ ಕೃತಜ್ಞತೆ ಹೇಳುತ್ತಿದೆ ಇವರೆಲ್ಲರಿಗೂ. ಮತ್ತೊಮ್ಮೆ ಇವರೆಲ್ಲರಿಗೂ ನಮ್ಮಿಂದ ಸೆಲ್ಯೂಟ್ ಹೇಳುವೆ.
-ಡಾ.ಶರಣಮ್ಮಾ ಪಾಟೀಲ್, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here