ಬಸವ ಜಯಂತಿಯಂದು ದಿನಸಿ ಕಿಟ್ ವಿತರಣೆ: ಬಸವಣ್ಣನವರ ಕಾಯಕ, ದಾಸೋಹ ತತ್ವ ವಿಶ್ವಕ್ಕೆ ಮಾದರಿ

0
54

ಆಳಂದ: ಪಟ್ಟಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯಿಂದ ಬಸವ ಜಯಂತಿ ಆಚರಿಸಲಾಯಿತು. ಅಧ್ಯಕ್ಷ ರಮೇಶ ಲೋಹಾರ ಅವರು ಕಡುಬಡವರಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿದರು. ಪಂಡಿತ ಬಳಬಟ್ಟಿ, ಪೂಜಾ ಮತ್ತಿತರರು ಇನ್ನೊಂದು ಚಿತ್ರ.

ಆಳಂದ: ಅಂದು ಇಂದು ಮುಂದೆಂದಿಗೂ ಪ್ರಸ್ತುತವಾಗಿರುವ ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವವನ್ನು ವಿಶ್ವಕ್ಕೆ ಮಾದರಿಯಾಗಿದೆ, ಇದನ್ನು ನಾವು ಚಾಚೂತಪ್ಪದೆ ಪಾಲಿಸಬೇಕಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ರಮೇಶ ಲೋಹಾರ ಅವರು ಇಂದಿಲ್ಲಿ ಹೇಳಿದರು.

Contact Your\'s Advertisement; 9902492681

ಲೌಕ್‌ಡೌನ್ ನಿಮಿತ್ತವಾಗಿ ಪಟ್ಟಣದ ತಮ್ಮ ನಿವಾಸದಲ್ಲಿ ರವಿವಾರ ಬಸವ ಜಯಂತಿ ಸರಳವಾಗಿ ಆಚರಿಸುವುದರೊಂದಿಗೆ ಕಡು ಬಡವರಿಗೆ ದಿನಸಿ ಸಾಮಗ್ರಿಗ ಕಿಟ್ ವಿತರಿಸಿ ಅವರು ಮಾತನಾಡಿದರು. ಬಸವಣ್ಣನವರು ಸಮಾನತೆ ತಳಹದಿಯ ಮೇಲೆ ಸಮಾಜವನ್ನು ಕಟ್ಟಿ ನುಡಿದಂತೆ ನಡೆದು ತೋರಿಸಿದ್ದಾರೆ. ಅವರ ಹಾಕಿಕೊಟ್ಟ ಮಾರ್ಗವೂ ನಮಗಷ್ಟೇ ಅಲ್ಲ ಇಡೀ ವಿಶ್ವಕ್ಕೆ ದಾರಿದೀಪವಾಗಿದೆ. ಕೊರೊನಾ ಮಹಾಮಾರಿಗೆ ಇಲ್ಲಿನ ಕಡುಬಡವರು ನಿರ್ಗತಿಕರಿಗೆ ಒಂದೊತ್ತಿನ ಊಟಕ್ಕೂ ಗತ್ತಿಯಿಲ್ಲವಾಗಿದ್ದು ಇಂಥ ಪರಿಸ್ಥಿತಿಯಲ್ಲಿ ಬಸವ ಗುರುವಿನ ನಾಮಸ್ಮರಣೆಯಲ್ಲಿ ಬಡವರಿಗೆ ಕೈಲಾದ ಮಟ್ಟಿಗೆ ನಿರಂತರವಾಗಿ ದಿನಸಿ ಸಾಮಗ್ರಿಗಳ ಕಿಟ್‌ನ್ನು ವಿತರಿಸಲಾಗುತ್ತಿದೆ, ಹೊರತು ಪ್ರಚಾರಕ್ಕಲ್ಲ. ಕಿಟ್ ನೀಡುವ ಸುದ್ದಿ ಅರಿತು ಮುಂದಾಗಿ ಬಂದ ಬಡವರನ್ನು ಬರಿಗೈಯಿಂದ ಕಳುಹಿಸಿದೆ ಕಿಟ್‌ಗಳನ್ನು ನೀಡಲಾಗುತ್ತಿದೆ. ಯಾರು ಕೂಡ ಹಸಿವಿನಿಂದ ಬಳಲು ಬಾರದೆಂಬ ಏಕೈಕ ಉದ್ದೇಶವಾಗಿದೆ. ಇದನ್ನೇ ನಮಗೆ ಬಸವಣ್ಣನವರು ಪರಸ್ಪರ ದಾಸೋಹ ಬಾವವನ್ನು ಕಲಿಸಿದ್ದು ಎಂದು ಹೇಳಿದರು.

ಸಾಮಗ್ರಿಗಳ ಕಿಟ್‌ಅನು ಪಡೆದ ಅನೇಕ ಮಹಿಳೆಯರು, ಇಂಥ ಪರಿಸ್ಥಿತಿಯಲ್ಲಿ ನಮಗೆ ದಿನಸಿ ಸಾಮಗ್ರಿಗಳ ನೀಡುತ್ತಿರುವುದು ಮರೆಯದಂತಾಗಿದೆ. ಸುಮಾರು ದಿನಗಳಿಂದ ಕಿರಾಣಿ ಕೊಡುತ್ತಿದ್ದಾರೆ ಎಂದು ಕೇಳಿ ನಮಗೂ ಕೊಡುತ್ತಾರೋ ಇಲ್ಲ ಎಂದು ಅನುಮಾನಿಸುತ್ತ ಇಲ್ಲಿಗೆ ಬಂದ್ದಿದ್ದೇವೆ. ಆದರೆ ಬರಿಗೈಯಿಂದ ಕಳುಹಿಸಿದೆ ನೀವು ಯಾರಂತನ್ನು ಕೇಳದೆ ದವಸ ಧಾನುಗಳು ನೀಡಿರಿವಿರಿ ಪುಣ್ಯಬರಲಿ ಎಂದು ಭಾವುಕರಾಗಿ ಕೈಮುಗಿದರು.

ಮುಖಂಡ ಪಂಡಿತರಾವ್ ಬಳಬಟ್ಟಿ, ಜಿಪಂ ಮಾಜಿ ಸದಸ್ಯೆ ಪೂಜಾ ಲೋಹಾರ ಇನ್ನಿತರರು ಸೇರಿ ಜೋಳದ ಹಿಟ್ಟು, ಅಕ್ಕಿ, ಎಣ್ಣೆ, ಜಿರಗಿ, ಅರಶಿಣ, ತೊಗರಿ ಬೇಳೆ ಹೀಗೆ ಇತರ ಸಾಮಗ್ರಿಯುಳ್ಳ ದಿನಸಿಗಳು ಸಂಗ್ರಹಿಸಿ ಕಿಟ್‌ಗಳನ್ನು ಸಿದ್ಧಪಡಿಸಿ ನೀಡುವಲ್ಲಿ ತೊಡಗಿದ್ದರು. ಪ್ರಭುದ್ಧ, ಶಿವಬಸವ ಮತ್ತು ಗಂಗಾ ಅವರು ಈ ವೇಳೆ ವಚನಗಳನ್ನು ಪಠಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here