ಪವಿತ್ರ ರಂಜಾನ ತಿಂಗಳಲ್ಲಿ ಎಲ್ಲ ಮುಸ್ಲಿಂ ಬಾಂಧವರು ಮನೆಯಲ್ಲಿಯೇ ಪ್ರಾರ್ಥನೆ ಮಾಡಿ

0
34

ಕಲಬುರಗಿ: ಕೊರೋನಾ ವೈರಸ್ (ಕೋವಿಡ್-19) ಹರಡಂತೆ ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ದೇಶದ ಹಾಗೂ ಸಮಾಜದ ಆರೋಗ್ಯದ ದೃಷ್ಟಿಯಿಂದ ಪವಿತ್ರ ರಂಜಾನ್ ತಿಂಗಳಲ್ಲಿ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆ ಒಳಗೊಂಡಂತೆ ದೈನಂದಿನ ಸಾಮೂಹಿಕ ಪ್ರಾರ್ಥನೆಯ ಜೊತೆಗೆ ತರಾವ್ಹಿ ನಮಾಜ್‍ನ್ನು ಮಸೀದಿಗಳಲ್ಲಿ ಮಾಡುವುದನ್ನು ನಿರ್ಭಂದಿಸಲಾಗಿದೆ. ಎಲ್ಲ ಮುಸ್ಲಿಂ ಬಾಂಧವರು ಮನೆಯಲ್ಲಿಯೇ ಇದ್ದು ಎಲ್ಲ ರೀತಿಯ ಪ್ರಾರ್ಥನೆ/ನಮಾಜ್‍ನ್ನು ಮಾಡಬೇಕೆಂದು ಕಲಬುರಗಿ ಜಿಲ್ಲಾ ವಕ್ಫ್ ಇಲಾಖೆಯ ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ.

ಪವಿತ್ರ ರಂಜಾನ್ ತಿಂಗಳ ಉಪವಾಸ ಆಚರಣೆಗೆ ಸಂಬಂಧಪಟ್ಟಂತೆ ಇಫ್ತಾರ್ ಕೂಟ ಏರ್ಪಡಿಸುವುದಾಗಲಿ, ಮಸೀದಿಯ ಸುತ್ತ ಆಹಾರ ಪದಾರ್ಥ ಅಂಗಡಿಗಳನ್ನು ತೆರೆಯುವುದಾಗಲಿ ಮತ್ತು ಯುವಕರು ರಾತ್ರಿ ವೇಳೆಯಲ್ಲಿ ವಾಹನಗಳಲ್ಲಿ ರಸ್ತೆ, ಮೊಹಲ್ಲಾ ಹಾಗೂ ವೃತ್ತಗಳಲ್ಲಿ ಅನಾವಶ್ಯಕವಾಗಿ ಓಡಾಡಬಾರದೆಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಅದೇ ರೀತಿ ಮುಂತಾದ ಪ್ರಮುಖ ಅಂಶಗಳ ಕುರಿತು ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ನೀಡುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಿ ಸಮಾಜದ ಹಿತದೃಷ್ಟಿಯನ್ನು ಕಾಪಾಡುವ ಮೂಲಕ ಶಾಂತಿಯುತವಾಗಿ ಪವಿತ್ರ ರಂಜಾನ್ ಮಾಸಾಚರಣೆ ಮಾಡಬೇಕೆಂದು ಜಿಲ್ಲಾ ವಕ್ಫ್ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರವಾದಿ ಮಹಮ್ಮದ್ ಪೈಗಂಬರ್ (ಸ.ಅ.) ರವರು ಯಾವುದೇ ಸಾಂಕ್ರಾಮಿಕ ರೋಗ ಉಲ್ಬಣಗೊಂಡಾಗ ಪ್ರತಿಯೊಬ್ಬರು ಯಾವುದೇ ಪ್ರದೇಶಗಳಿಗೆ ತೆರಳದೇ ಮನೆಯಲ್ಲಿಯೇ ಇದ್ದು ಪ್ರಾರ್ಥನೆ, ನಮಾಜ ಮಾಡುವುದರ ಕುರಿತು ಉಪದೇಶಿಸಿರುವುದರಿಂದ, ಸಾರ್ವಜನಿಕರು ಮನೆಯಲ್ಲಿಯೇ ಇದ್ದುಕೊಂಡು ಉಪವಾಸ ಆಚರಣೆ ಮಾಡಿ, ಇದೇ ಮಾಹೆಯ ಅಂತಿಮ ಘಟ್ಟದಲ್ಲಿ ಬರುವ ಶಬೆಖದ್ರ ಪವಿತ್ರ ಶುಭ ರಾತ್ರಿಯಲ್ಲಿ ಸಕಲ ಮಾನವಕುಲದ ಒಳತಿಗಾಗಿ ಹಾಗೂ ಕೋವಿಡ್-19 ಸೋಂಕಿನ ನಿವಾರಣೆಗಾಗಿ ಅಲ್ಲಾಹುನಲ್ಲಿ ಪ್ರಾರ್ಥಿಸಬೇಕೆಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here