ಬಿಸಿ ಬಿಸಿ ಸುದ್ದಿಕಲೆ-ಕ್ರೀಡೆಸಾಹಿತ್ಯಹೈದರಾಬಾದ್ ಕರ್ನಾಟಕ ಭೂದೇವಿಗಿಂದು ಜನುಮ ದಿನ ಮೂಲಕ emedialine - April 28, 2020 0 93 Facebook Twitter Pinterest WhatsApp ಸಾವಿರದ ಶರಣವ್ವ ನೆಲದವ್ವ ನಿನಗೆ ನನ್ನ ಸಾವಿರ ತಪ್ಪುಗಳ ಮನ್ನಿಸಿದಾಕೆ ಅನು ದಿನವೂ ಪ್ರತಿ ಕ್ಷಣವೂ ತುಳಿಯುತಿರುವೆ ಮೆಧಿನಿಯ ಮೈ ಮೇಲೆ ಚಪ್ಪಲಿಯ ನಾ ಮೆಟ್ಟಿ ನನಗಾಗಿ ಏನೆಲ್ಲ ನೀ ತಂದು ಕೊಟ್ಟೆ ಬದಲಾಗಿ ನಾ ನಿನಗೆ ನೋವನ್ನೇ ಕೊಟ್ಟೆ ಪ್ರಕೃತಿಯ ಮಡಿಲಲ್ಲಿ ನೆಮ್ಮದಿ ನೀನಿಟ್ಟೆ ವಿಕೃತಿ ಭಾವದಲಿ ಎಲ್ಲವ ನಾ ಸುಟ್ಟೆ ಮರಳ ತೆಗೆಯುತಲಿ ಮಡಿಲನ್ನೇ ಬಗೆದೆ ಮರ ಗಿಡಗಳ ಕಡಿದು ಬರ ಕೂಗಿ ಕರದೆ ಹಣದಾಸೆ ಮೋಹದಲಿ ಅತಿಯಾಗಿ ವರ್ತಿಸಿದೆ “ಅವನಿ”ಯ ಮೈ ಪರಚಿ ಅವಳಂದ ಕೆಡಿಸಿರುವೆ ಅಷ್ಟಾದರೂ ಧಾರಿಣಿ ದಯೆಯನ್ನೇ ನೀಡಿಹಳು ಹುಸಿ ನುಡಿದರೂ ನೀನು ಉಸಿರನ್ನೇ ನೀಡಿಹಳು ಹಸಿರುಟ್ಟ ಮೈಮನದಿ ಉಸಿರು ನೀಡೋ ತಾಯಿ ಹಸಿರು ಉಸಿರಾಗಿಸಲು ಸಿದ್ಧರಾಗೋಣ ಅವಳ ಜನುಮ ದಿನವಿಂದು ಬಸವರಾಜ್ ಚೌಡ್ಕಿ NEKRTC ಕುಕನೂರ