ಕಲಬುರಗಿ: ವಾರ್ಡ್ 33.ರಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಹೋಟಲ್ ಪೂರ್ಣಾನಂದ ಗ್ರೂಪ್ ಮಾಲಿಕರಾದ ರಾಜಶೇಖರ ಎಂ. ಶೇಳಗಿ ಕುಟುಂಬದ ನೇತೃತ್ವದಲ್ಲಿ 200 ಬಡ ಕುಟುಂಬಗಳಿಗೆ 25.ಕೆಜಿ ಅಕ್ಕಿ, ಎಣ್ಣೆ, ಬೇಳೆ ಗಳನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ಅವರು ವಿತರಿಸಿದರು. ಶಿವುಕುಮಾರ ಬಾಳಿ, ಅನೀಲಕುಮಾರ ಶೇಳಗಿ, ವಿಜಯಕುಮಾರ ಶೇಳಗಿ, ಮಹಾದೇವ ಶೇಳಗಿ, ಮಲ್ಲಿಕಾರ್ಜುನ, ಶಾಂತಕುಮಾರ ಇದ್ದರು.