ಕೊರೋನಾ ವಾರಿಯರ್ಸ್‍ಗಳಿಗೆ ಸ್ವ-ರಕ್ಷಣಾ ಸಾಮಾಗ್ರಿಗಳ ಅಗತ್ಯತೆ ಹೆಚ್ಚಿದೆ: ಶಾಸಕ ಪ್ರಿಯಾಂಕ್ ಖರ್ಗೆ

0
45

ಕಲಬುರಗಿ: ಜಿಲ್ಲೆಯಲ್ಲಿ ಕೊರೋನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೋನಾ ವೈರಸ್ ನಿಯಂತ್ರಿಸಲು ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ವೈದ್ಯರು, ನರ್ಸ್‍ಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಕೊರೋನಾ ವಾರಿಯರ್ಸ್‍ಗಳಿಗೆ ಸ್ವ-ರಕ್ಷಣಾ ಸಾಮಾಗ್ರಿಗಳ ಅಗತ್ಯತೆ ಹೆಚ್ಚಿದ್ದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.

ಈ ನಿಟ್ಟಿನಲ್ಲಿ ಎರಡನೇ ಬಾರಿಗೆ, ಕನ್ನಡಕವನ್ನು ಒಳಗೊಂಡ ಪಿಪಿಇ ಕಿಟ್ : 100, ಥರ್ಮಲ್ ಸ್ಕ್ಯಾನರ್ : 10,ಫೇಸ್ ಶೀಲ್ಡ್ : 350, ಸರ್ಜಿಕಲ್ ಮಾಸ್ಕ್ : 10,000, ಗ್ಲೌಸ್ : 10,000 ಜೋಡಿ ,ಸ್ಯಾನಿಟೈಸರ್ : 600 (100mಟ) + 900 (500mಟ) ಇನ್ನಿತರ ರಕ್ಷಣಾ ಸಾಮಾಗ್ರಿಗಳನ್ನು ಶಾಸಕ ಪ್ರಿಯಾಂಕ ಖರ್ಗೆ ಅವರು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು ಮಾತನಾಡಿದರು.

Contact Your\'s Advertisement; 9902492681

ಮುಂದಿನ ದಿನಗಳಲ್ಲಿಯೂ ನನ್ನ ಸಹಕಾರ ಮತ್ತು ಸಹಾಯ ಜಿಲ್ಲಾಡಳಿತದ ಜೊತೆ ಇರುತ್ತದೆ ಎಂಬ ಭರವಸೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದೇನೆ. ಇದೇ ವೇಳೆ ಜಿಲ್ಲಾಧಿಕಾರಿಗಳು ಮತ್ತು ಪೆÇಲೀಸ್ ಆಯುಕ್ತರ ಜೊತೆ ಜಿಲ್ಲೆಯ ಕೊರೋನಾ ನಿಯಂತ್ರಣ, ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ ಹಾಗೂ ಕ್ವಾರಂಟೈನ್ ವ್ಯವಸ್ಥೆ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಪೆÇಲೀಸ್ ಕಮಿಷನರ್ ಸತೀಶ್ ಕುಮಾರ್, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಜಗದೇವ ಗುತ್ತೆದಾರ್, ಕಾಂಗ್ರೆಸ್ ಪಕ್ಷದ ಟಾಸ್ಕ್ ಫೆÇೀರ್ಸ್ ಜಿಲ್ಲಾಧ್ಯಕ್ಷ ಡಾ. ಕಿರಣ್ ದೇಶಮುಖ್, ಪ್ರವೀಣ್ ಪಾಟೀಲ್ ಹರವಾಳ . ಮಜರ ಆಲಂ ಖಾನ್, ಫಾರೂಕ್ ಮನಿಯಾಲ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here