ರಂಗಂಪೇಟೆಯಲ್ಲಿ ಮಹರ್ಷಿ ಭಗೀರಥರ ಜಯಂತಿ ಆಚರಣೆ

0
75

ಸುರಪುರ: ಸಗರ ಚಕ್ರವರ್ತಿ ರಘು ಮಹಾರಾಜ ಹಾಗು ದಶರಥ ಮಹಾರಾಜ ಮತ್ತು ಅಯೋಧ್ಯಯ ಪ್ರಭು ಶ್ರೀರಾಮಚಂದ್ರರ ಶ್ರೇಷ್ಠ ಪರಂಪರೆಯ ನಮ್ಮ ಕುಲ ಪುರುಷರಾದ ಮಹರ್ಷಿ ಭಗೀರಥರ ಜಯಂತಿಯನ್ನು ಇಂದು ಕೊರೊನಾ ಲಾಕ್‍ಡೌನ್ ಇರುವುದರಿಂದ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಮಹರ್ಷೀ ಭಗೀರಥ ಸಮಾಜದ ತಾಲೂಕು ಅಧ್ಯಕ್ಷ ಭೀಮಣ್ಣ ಚಿಕ್ಕನಹಳ್ಳಿ ಮಾತನಾಡಿದರು.

ನಗರದ ರಂಗಂಪೇಟೆಯಲ್ಲಿರುವ ಭಗೀರಥ ಮಹರ್ಷಿ ವೃತ್ತದಲ್ಲಿನ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಭಗೀರಥರ ಜಯಂತಿ ಆಚರಿಸಿ ಮಾತನಾಡಿ,ಪ್ರತಿ ವರ್ಷ ತುಂಬಾ ಅದ್ಧೂರಿಯಾಗಿ ಜಯಂತಿ ಆಚರಿಸಲಾಗುತ್ತಿತ್ತು,ಆದರೆ ಈ ವರ್ಷ ಲಾಕ್‍ಡೌನ್ ಇರುವುದರಿಂದ ಸರಳವಾಗಿ ಆಚರಿಸಲಾಗುತ್ತಿದೆ.ಜಯಂತಿ ಸರಳವಾಗಿದ್ದರು ನಾವೆಲ್ಲರು ಭಗೀರಥ ಮಹರ್ಷಿಯವರು ಕೊಟ್ಟ ಸಂದೇಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ಆದರ್ಶವನ್ನು ಬದುಕಲ್ಲಿ ಅಳವಡಿಸಿಕೊಳ್ಳೋಣ ಎಂದರು.

Contact Your\'s Advertisement; 9902492681

ಭಗೀರಥ ಸಮಾಜದ ತಾಲೂಕು ಉಪಾಧ್ಯಕ್ಷ ಗೋವಿಂದರಾಜ್ ಶಹಾಪುರಕರ್ ಮಾತನಾಡಿ,ಭಗೀರಥ ಮಹರ್ಷಿಯವರು ನಮ್ಮ ಸಮುದಾಯದವರು ಎಂಬುದು ನಮಗೆ ದೊಡ್ಡ ಹೆಮ್ಮೆಯ ಸಂಗತಿಯಾಗಿದೆ.ಸರಕಾರ ಕಳೆದೆರಡು ವರ್ಷಗಳಿಂದ ಜಯಂತಿ ಆಚರಿಸುತ್ತಿದೆ,ಇದರ ಜೊತೆಗೆ ನಮ್ಮ ಸಮುದಾಯದ ಜನರ ಅಭೀವೃದ್ಧಿಗೆ ಸರಕಾರ ಒತ್ತು ನೀಡಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಭಗೀರಥರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಜಯಘೋಷ ಮೊಳಗಿಸುವ ಜೊತೆಗೆ ಸಿಹಿ ಹಂಚಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ಗದ್ವಾಲ್,ದೇವಿಂದ್ರಪ್ಪ ಮಾಸ್ತರ್ ಅಲದರ್ತಿ,ವೆಂಕಣ್ಣ ಗದ್ವಾಲ್,ನಾಗಪ್ಪ ಶಹಾಪುರಕರ್,ರವಿ ಅಲದರ್ತಿ,ವೆಂಕಟೇಶ ಅಲದರ್ತಿ,ಜಗದೀಶ ಅಲದರ್ತಿ,ಅಂಬ್ರೇಶ ಬಿರೆದಾರ,ವೆಂಕಟೆಶ ಶಹಾಪುರಕರ್,ಗುರುರಾಜ ಅಲದರ್ತಿ,ಅವಿನಾಶ,ಶಂಕರ ಬಡಿಗೇರ,ಪ್ರಕಾಶ ಬಡಿಗೇರ,ಪ್ರದೀಪ ಬಿರೆದಾರ,ಯಮನಪ್ಪ ಬಿರೆದಾರ,ದೇವು ಶಹಾಪುರಕರ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here