ಕಲಬುರಗಿ: ನಗರದ ಉತ್ತರ ಮತಕ್ಷೇತ್ರದಲ್ಲಿಯೇ ಅತಿ ಹೆಚ್ಚಾಗಿ ಕರೋನಾ ಸೊಂಕಿತರ ಸಂಖ್ಯೆ ಹೆಚ್ಚಿಗಿದ್ದು, ಇಲ್ಲಿಯ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ಒದಗಿಸುವಲ್ಲಿ ಮುಂದಾಗಬೇಕಾಗಿರುವ ಉತ್ತರ ಮತಕ್ಷೇತ್ರದ ಶಾಸಕಿ ಕನ್ನೀಜ್ ಫಾತಿಮಾ ಅವರು ಕಾಣೆಯಾಗಿದ್ದಾರೆ ಎಂದು ಮಹಾನಗರ ಬಿಜೆಪಿ ಅಧ್ಯಕ್ಷ ಸಿದ್ದಾಜಿ ಪಾಟೀಲ್ ನುಡಿದರು.
ಉತ್ತರ ಮತಕ್ಷೇತ್ರದಲ್ಲಿ ಕರೋನಾ ಹಿನ್ನೆಲೆಯಲ್ಲಿ ಅನೇಕ ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಆನರು ಭಯಕ್ಕೊಳಗಾಗಿದ್ದಾರೆ. ಒಬ್ಬ ಜನ ಪ್ರತಿನಿಧಿಯಾಗಿ ಶಾಸಕಿ ಫಾತಿಮಾ ಅವರು ಜನರಲ್ಲಿ ದೈರ್ಯ ತುಂಬುವ ಮತ್ತು ಪರಿಹಾರ ನೀಡುವ ಕಾರ್ಯದಲ್ಲಿ ತೊಡಗಬೇಕು. ಆದರೆ ಅವರು ಈ ಕ್ಷೇತ್ರದಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲ, ಇದೆಲ್ಲವನ್ನು ನೋಡಿದರೆ ಅವರಿಗೆ ಜನಪರ ಕಾಳಜಿ ಇಲ್ಲ ಎಂದೆನಿಸುತ್ತದೆ ಎಂದು ಸಿದ್ದಾಜಿ ಪಾಟೀಲ್ ಆರೋಪಿಸಿದ್ದಾರೆ.
ಬರೀ ಸರಕಾರವನ್ನು ಟ್ವೀಟರ್ ಮೂಲಕ ಟೀಕಿಸುವಲ್ಲಿ ತೊಡಗಿರುವ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಪಕ್ಷದ ಜನಪರ ಕಾಳಜಿಯಿಂದ ದೂರ ಇರುವ ಶಾಸಕರ ಬಗ್ಗೆ ಏಕೆ ಮಾತನಾಡುತಿಲ್ಲ. ಮೊದಲು ತಮ್ಮ ಪಕ್ಷದ ಶಾಸರಕರನ್ನು ಸರಿ ದಾರಿಗೆ ತರಲಿ, ನಂತರ ಸರ್ಕಾರದ ಬಗ್ಗೆ ಮಾತನಾಡಲಿ ಎಂದು ಹೇಳಿದ್ದಾರೆ.
ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಯುವ ಮುಖಂಡ ಚಂದು ಪಾಟೀಲ್ ಅವರು ಶಾಸಕ ಬಿ.ಜಿ.ಪಾಟೀಲ ಮಾರ್ಗದರ್ಶನದಲ್ಲಿ ಯುವಕರ ತಂಡ ಕಟ್ಟಿಕೊಂಡು ಪರಿಹಾರ ನೀಡುವ ಕಾರ್ಯದಲ್ಲಿ ತೊಡಗುವ ಮೂಲಕ ಬಡವರ ಕಣ್ಣಿರು ಒರೆಸುತ್ತಿದ್ದಾರೆ. ಅವರ ಕಾರ್ಯಕ್ಕೆ ಜನತೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಸಿದ್ದಾಜಿ ಪಾಟೀಲ್ ಅವರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.