ಕಲಬುರಗಿ: ವಿಶ್ವ ಕಾಯಕ ದಿನಾಚರಣೆ ಪ್ರಯುಕ್ತ ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ವತಿಯಿಂದ ನಗರದ ಟೌನ್ ಹಾಲ್ ನಲ್ಲಿ ಶುಕ್ರವಾರ ಬೆಳೆಗ್ಗೆ 120 ಜನ ಪೌರ ಕಾರ್ಮಿಕರಿಗೆ ಉಪಹಾರ ವಿತರಿಸಲಾಯಿತು. ಸಮಾಜ ಸೇವಕ ಸುನೀಲಕುಮಾರ ವಂಟಿ, ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರಮುಖರಾದ ಅಶೋಕ ಪಾಟೀಲ, ಸುನೀಲ ಜೆ.ವಂಟಿ, ಸುಜಯ್ ಎಸ್.ವಂಟಿ ಸೇರಿದಂತೆ ಹಲವರಿದ್ದರು.