ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನಪಡೆ ನೇತೃತ್ವದಲ್ಲಿ ಪ್ರತಿಭಟನೆ

0
165

ಕಲಬುರಗಿ: ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿನ ವಿಜಯಬ್ಯಾಂಕ (ಬ್ಯಾಂಕ್ ಆಫ್ ಬರೋಡಾ) ಶಾಖಾ ಕಚೇರಿಯಲ್ಲಿ ರೈತರು ತಮ್ಮ ಖಾತೆಗೆ ಜಮೇಯಾದ ತೊಗರಿ ಹಣ ನೀಡುವಲ್ಲಿ ಸ್ಥಳಿಯ ಬ್ಯಾಂಕ ವ್ಯವಸ್ಥಾಪಕರು ನಿರಾಕರಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನಪಡೆ ನೇತೃತ್ವದಲ್ಲಿ ನೂರಾರು ರೈತರು ದಿಢೀರ್ ಪ್ರತಿಭಟನೆ ನಡೆಸಿ, ಬ್ಯಾಂಕ್ ವ್ಯವಸ್ಥಾಪಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಭೆಬ್ರವರಿ-ಮಾರ್ಚ್ ತಿಂಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಕೃಷಿ ಪತ್ತಿನ ಸಹಕಾರ ಸಂಘದಿಂದ ಖರೀದಿಸಿದ ತೊಗರಿ ಮೊತ್ತವು ಆ ಬ್ಯಾಂಕ್ ಗೆ ಜಮೆಯಾಗಿದೆ. ಕೆಲ ರೈತರು ಹಣ ಡ್ರಾ ಮಾಡಲು ಬ್ಯಾಂಕ್‍ಗೆ ತೆರಳಿದರೆ, ಜಾಮೀನು ನೀಡಿದವರ ಸಾಲ ಮರುಪಾವತಿಸಬೇಕು. ಆದರೆ ಸರ್ಕಾರದಿಂದ ಲಿಖಿತ ಆದೇಶ ಪ್ರತಿ ತಂದರೆ ತೋಗರಿ ಮಾರಾಟದ ಹಣ ಕೊಡುವುದಾಶಗಿ ಉಡಾಫೆಯಾಗಿ ವರ್ತಿಸಿದ್ದಾರೆ.

Contact Your\'s Advertisement; 9902492681

ಆದರೆ ಜಿಲ್ಲೆಯ ಇತರೆ ಬ್ಯಾಂಕ್‍ಗಳಲ್ಲಿ ರೈತರ ತೊಗರಿ ಹಣಕ್ಕೆ ಯಾವುದೇ ತೊಂದರೆ ಅನುಭವಿಸಿಲ್ಲ. ತಕ್ಕಣ ಲೀಡ್ ಬ್ಯಾಂಕ್ ಮುಖು ವ್ಯವಸ್ಥಾಪಕರು ಮಧ್ಯಪ್ರವೇಶಿಸಿ ರೈತತರಿಗೆ ಅನಗತ್ಯ ಕಿರುಕುಳ ನೀಡುವುದನ್ನು ತಪ್ಪಿಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

ಇನ್ನು ಕೆಲ ರೈತರು ಬೆಳೆ ಸಾಲ ಮರುಪಾವತಿ ಅವಧಿ ಜೂನ್ ತಿಂಗಳಲ್ಲಿದೆ. ಆ ವೇಳೆ ಸಾಲ ಭರ್ತಿ ಮಾಡುತ್ತೇವೆ ಎಂದು ಭರವಸೆ ನೀಡಿದರೂ ರೈತರ ಸಂಕಷ್ಟಗಳು ಕೇಳುವವರು ಇಲ್ಲದಂತಾಗಿದೆ. ತಕ್ಷಣ ಈ ಬ್ಯಾಂಕ್ ವ್ಯವಸ್ಥಾಪಕರ ವಿರುದ್ದ ಶಿಸ್ತು ಕ್ರಮ ಜರುಗಬೇಕು ಎಂದು ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಶಾಂತಪ್ಪ ಪಾಟೀಲ್, ಗ್ರಾಪಂ ನೌಕರರ ಸಂಘ ಜಿಲ್ಲಾ ಖಜಾಂಚಿ ಶಿವಾನಂದ ಕವಲಗಾ(ಬಿ) ಸೇರಿದಂತೆ ಅನೇಕ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here