ಮಾನವೀಯತೆ ಮೆರೆದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಈರಣ್ಣ ಝಳಕಿ

0
321

ಕಲಬುರಗಿ: ಕ್ಯಾನ್ಸರ್ ರೋಗಿಯೊಬ್ಬರಿಗೆ ತಮ್ಮ ಬೈಕ್‍ನಲ್ಲಿ ಕರೆದೊಯ್ದು ಚಿಕಿತ್ಸೆ ಹಾಗೂ ಮಾತ್ರೆ ಕೊಡಿಸಿ ಮನೆಗೆ ತಲುಪಿಸಿ ಮಾನವೀಯತೆ ಮೆರೆದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಈರಣ್ಣ ಝಳಕಿ ಅವರು ಕ್ಯಾನ್ಸರ್ ಪೀಡಿತ ವಯೋವೃದ್ದ ರೋಗಿಯೊಬ್ಬರಿಗೆ ತಮ್ಮ ಬೈಕಿನಲ್ಲೇ ಕಿದ್ವಾಯಿ ಅಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಹಾಗೂ ಮಾತ್ರೆ ಕೊಡಿಸಿ ನಂತರ ಮತ್ತೆ ಅವರನ್ನ ಸುರಕ್ಷಿತ ವಾಗಿ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಸೂಕ್ತ ಚಿಕಿತ್ಸೆ ಹಾಗೂ ಅಗತ್ಯ ಮಾತ್ರೆಗಳಿಲ್ಲದ ಕಲಬುರಗಿ ಹೊರವಲಯದ ನಂದಿಕೂರು ನಿವಾಸಿ 68 ವರ್ಷ ವಯೋಮಾನದ ಕಾನ್ಸರ್ ರೋಗಿಯೊಬ್ಬರು ಈರಣ್ಣ ಝಳಕಿ ಅವರಿಗೆ ಕರೆ ಮಾಡಿ ಆಸ್ಪತ್ರೆಗೆ ಹೋಗಲು ಯಾವುದೇ ವಾಹನ ಸೌಲಭ್ಯ ದೊರಕದ ಬಗ್ಗೆ ವಿವರಿಸಿ ಸಹಾಯ ಮಾಡುವಂತೆ ಕೋರಿದ್ದಾರೆ. ಕೂಡಲೇ ತಮ್ಮ ಬೈಕ್ ನಲ್ಲಿ ಅವರ ನಿವಾಸಕ್ಕೆ ಧಾವಿಸಿದ ಈರಣ್ಣ ಝಕಳಿ ಆ ವಯೋವೃದ್ದರನ್ನು ತಮ್ಮ ಬೈಕ್‍ನಲ್ಲೇ ಕರೆದೊಯ್ದು ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದರ ಜೊತೆಗೆ ಅವರಿಗೆ ಬೇಕಾದ ಅಗತ್ಯ ಮಾತ್ರೆಗಳನ್ನು ಕೊಡಿಸಿ ಅವರಿಗೆ ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.

Contact Your\'s Advertisement; 9902492681

ಈ ಕುರಿತು ತಮ್ಮ ಅನುಭವ ಹಂಚಿಕೊಂಡ ವಯೋವೃದ್ದರು ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ತಾವು ವಾಸವಾಗಿರುವ ಏರಿಯಾಗೆ ಯಾವುದೇ ವಾಹನ ಬಾರದಿದ್ದರಿಂದ ಕೊನೆಗೆ ಈರಣ್ಣ ಝಳಕಿ ಅವರಿಗೆ ಕರೆ ಮಾಡಿ ಅವರಿಂದ ಸಹಾಯ ಪಡೆದುಕೊಂಡೆ ಎಂದು ಅವರ ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊರೋನಾ ವೈರಸ್ ಕಲಬುರಗಿ ನಗರ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಹಬ್ಬುತ್ತಿದ್ದು ಲಾಕ್ ಡೌನ್ ವಿಸ್ತರಿಸಲಾಗಿದೆ. ಹಾಗಾಗಿ, ವಯೋವೃದ್ದ ಕ್ಯಾನ್ಸರ್ ಪೀಡಿತರು ತಮ್ಮ ಸಮಸ್ಯೆಯನ್ನು ನನ್ನ ಬಳಿ ತೋಡಿಕೊಂಡರು. ಕೂಡಲೇ ನಾನು ಅವರಿಗೆ ನೆರವಾಗಿ ನನ್ನ ಕರ್ತವ್ಯ ಹಾಗೂ ಸಮಾಜಿಕ ಜವಾಬ್ದಾರಿ ನಿಭಾಯಿಸಿದ್ದೇನೆ ಎಂದು ಝಳಕಿ ಹೇಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here