ನಿತ್ಯೋತ್ಸವ ಕವಿ ನಿಧನಕ್ಕೆ ಮಾಜಿ ಸಚಿವರು ಸೇರಿ ಹಲವರ ಸಂತಾಪ

0
59

ಸುರಪುರ: ನಿತ್ಯೋತ್ಸವದ ಮೂಲಕ ನಾಡಿಗೆ ಚಿರಪರಿಚಿತರಾಗಿದ್ದ ಜಗದ ಕವಿ,ಯುಗದ ಕವಿ ಕೆ.ಎಸ್.ನಿಸಾರ್ ಅಹಮದ್ ಅವರ ನಿಧನ ಈ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಸಚಿವ ರಾಜಾ ಮದನ ಗೋಪಾಲ ನಾಯಕ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕವಿ ಕೆ.ಎಸ್.ನಿಸಾರ್ ಅಹಮದ್ ಅವರ ನಿಧನದ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ನಿಸಾರ್ ಅಹಮದ್ ಎಂಬುವವರು ಅವರೊಬ್ಬ ನಾಡಿನ ಆಸ್ತಿಯಾಗಿದ್ದರು, ಜಾತಿ ಮತ ಧರ್ಮಗಳ ಹಂಗನ್ನು ಮೀರಿ ನಿತ್ಯವು ಕನ್ನಡ ಕನ್ನಡವೆಂದು ಕನ್ನಡವೇ ಜಾತಿ ಕನ್ನಡವೇ ಧರ್ಮವೆಂದು ಬದುಕಿದವರು.ಅಂತಹ ಮಹಾನ್ ಚೇತನ ಇಂದು ನಾಡನ್ನು ಅಗಲಿದ್ದು ತೀವ್ರ ದುಃಖ ತರಿಸಿದೆ.ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಪ್ರಾರ್ಥಿಸಿದರು.

Contact Your\'s Advertisement; 9902492681

ಅದೇರಿತಿಯಾಗಿ ಕೆ.ಎಸ್.ನಿಸಾರ್ ಅಹಮದ್ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿ,ಮಾಜಿ ಕಸಾಪ ಅಧ್ಯಕ್ಷ ಶಾಂತಪ್ಪ ಬೂದಿಹಾಳ,ಕರವೇ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ ಪಡಕೋಟೆ, ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ತಾಲೂಕು ಅಧ್ಯಕ್ಷ ರಾಜು ಕುಂಬಾರ,ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮರಡಿ,ಜಯಕರ್ನಾಟಕ ಅಧ್ಯಕ್ಷ ರವಿ ನಾಯಕ,ಯುವ ಕರವೇ ನಗರಧ್ಯಕ್ಷ ಸಚಿನ್ ಕುಮಾರ ನಾಯಕ,ದೇವು ಹೆಬ್ಬಾಳ,ರಾಜಶೇಖರ ದೇಸಾಯಿ,ಅನ್ವರ್ ಜಮಾದಾರ್,ಕರವೇ ರಾಘವೇಂದ್ರ ಗೆದ್ದಲಮರಿ ಸೇರಿದಂತೆ ಅನೇಕರು ಕವಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here