ಕಲಬುರಗಿ: ಕೊರೋನಾದಿಂದ ಇಡೀ ಜಗತ್ತು ಮತ್ತು ದೇಶ, ನಾಡು, ಜಿಲ್ಲೆ ತಲ್ಲಣಗೊಂಡಿದೆ. ಮುನ್ನ ಎಚ್ಚರಿಕೆ ಕ್ರಮವಾಗಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಹಾಕಿಕೊಂಡು ಅನಿವಾರ್ಯ ಕಾರಣಗಳಿಂದ ಮಾತ್ರ ಹೊರಗೆ ಹೋಗಬೇಕು ಎಂದಾಗ ಮಾತ್ರ ಸೈಕಲ್ ಸವಾರಿ ಮಾಡಲಾಗಿದೆ.
ಈ ದಿನಗಳಲ್ಲಿ ಮೂರು ಬಾರಿ ದ್ವಿಚಕ್ರ ವಾಹನ ಸಂಚಾರ ಮಾಡಿದ್ದೇನೆ. ಮೆಡಿಕಲ್, ತರಕಾರಿ, ಕಿರಾಣಿ ಮತ್ತು ಇತರೆ ಕೆಲಸ ಬಂದಾಗ ಮಾತ್ರ ನಾನು ಸೈಕಲ್ ಬಳಕೆ ಮಾಡುವ ಪ್ರಕ್ರಿಯೆ ಹೆಚ್ಚುಗಿತ್ತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗಲು ಇನ್ನೊಬ್ಬರ ಸಹಾಯ ಮಾಡಲು ದ್ವಿಚಕ್ರ ವಾಹನ ಸಂಚಾರ ಮಾಡಿದ್ದೇನೆ ಕೇವಲ ಮೂರು ಬಾರಿ ಮಾತ್ರ.
ಈ ಕೊರೋನಾ ಸಂದರ್ಭದಲ್ಲಿ ಕರ್ನಾಟಕ ರತ್ನ, ಲಿಂ.ಶ್ರೀ ಡಾ. ಶಿವಕುಮಾರ್ ಮಹಾ ಸ್ವಾಮಿ ಜಿ ಅವರು, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, 12 ನೇಯ ಶತಮಾನದ ಕಾಂತ್ರಿಪುರುಷ, ಅನುಭವ ಮಂಟಪದ, ವಚನಗಳ ಹರಿಕಾರ ಬಸವ ಜಯಂತಿ ಆಚರಣೆ ಮಾಡುವ ಸಂದರ್ಭದಲ್ಲಿ ಅತ್ಯಂತ ಸರಳ ಮತ್ತು ಕಡಿಮೆ ಜನ, ಸಾಮಾಜಿಕ ಅಂತರ ಕಾಪಾಡಿಕೊಂಡು, ಸೈಕಲ್ ನಲ್ಲಿ ನನ್ನ ಸಂಚಾರ, ಅಕ್ಕ ಪಕ್ಕದ ಮನೆಯವರುಗೂ ಸಹಾಯ ಔಷಧಿ ತೆಗೆದುಕೊಂಡು ಹೋಗಿ ಕೊಟ್ಟಿದ್ದೇನೆ.
ನಿತ್ಯ ಬೆಳಿಗ್ಗೆ ಮತ್ತು ಸಾಯಂಕಾಲ ಸೈಕಲ್ ನಲ್ಲಿ ನಮ್ಮ ಪ್ರಯಾಣ ಮಾಡುವಾಗ ಹಿರಿಯರು, ಸ್ನೇಹಿತರು ಮತ್ತು ಇತರರು ಸಿಕ್ಕರೆ ಸೈಕಲ್ ನೋಡಿ ಎಲ್ಲರೂ ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಹೇಳುತ್ತೀದ್ದರು.
ಈಗ ಸೈಕಲ್ ಸವಾರಿ ಮಾಡುವಾಗ ಖುಷಿ ಎನಿಸುತ್ತದೆ. ಕೊರೋನಾಕ್ಕಿಂತ ಮೊದಲು ಸೈಕಲ್ ನೋಡಿದರೆ ನಗುತ್ತಿದವರು. ಈಗ ಸೈಕಲ್ ಒಳ್ಳೆಯ ಕೆಲಸಕ್ಕೆ ಉಪಯೋಗಿಸಲು ಬರುತ್ತದೆ. ಎಂದು ಹೇಳುತ್ತಾರೆ.
ಇದರಿಂದ ಇಂಧನ ಉಳಿತಾಯ, ಪರಿಸರ ರಕ್ಷಣೆ, ಮನುಷ್ಯನಿಗೆ ಒಂದು ವ್ಯಾಯಾಮ ಆಗುತ್ತದೆ. ದಿನಕ್ಕೆ ಸುಮಾರು ಐದು ಆರು ಕೀ.ಮೀ. ಸಹಜವಾಗಿ ನಡೆಸಬಹುದು. ಸುಮಾರು ಹತ್ತು ಕೀ.ಮೀ. ಇದರ ಮೇಲೆ ಪ್ರಯಾಣ ಮಾಡಿದ ಖುಷಿ ಎನಿಸುತ್ತದೆ ಬಿ.ಎಂ.ಪಾಟೀಲ ಕಲ್ಲೂರ ತಿಳಿಸಿದ್ದಾರೆ.