ಬೀಳುತ್ತ ಏಳುತ್ತ ನಡೆಯುವಾಗ ಕೈ ಹಿಡಿದು ನಡೆಸಿದೆ ನೀನಮ್ಮಾ ತೊದಲುತ್ತಾ ಮೊದಲುತ್ತಾ ನುಡಿಯುವಾಗ ಮಮತೆಯ ನುಡಿ ನೀ ಹೇಳಿದೆಮ್ಮಾ ಚೆಂದದಿ ನಡೆದು ಅಂದದಿ ನುಡಿಯುತ್ತಾ ನಾನಕ್ಕಾಗ ನೀ ನಕ್ಕಿದ್ದು ನೀ ಮರೆತೆಯಮ್ಮಾ… ನೀ ಮರತೆಯಮ್ಮಾ
ಗುರವಾಗಿ ನನ್ನ ತಿದ್ದಿ ತೀಡಿ ಬದುಕಿನ ಜಯದ ಗುಟ್ಟನ್ನು ಹೇಳಿ ವಾತ್ಸಲ್ಯದಿ ಪ್ರೀತಿ ಪ್ರೇಮವ ಕಲಿಸಿ ಧೈರ್ಯದಿ ನಾ ಮುನ್ನುಗ್ಗುವಾಗ ನನ್ನ ಜಯದಿ ನಿನ್ನ ಜಯ ಕಾಣಿದ್ದು ನೀ ಮರೆತೆಯಮ್ಮಾ.. ನೀ ಮರತೆಯಮ್ಮಾ
ತುಂಬಾ ಉತ್ತಮ ಹಾಗೂ ಉತ್ಸಾಹ ನೀಡುವಂಥ ಕವನ ಗುರುಗಳೇ…
ತಾಯಿ ಗುರುವಾಗಿ, ಪ್ರೀತಿ ವಾತ್ಸಲ್ಯದ ಖಣಿಯಾಗಿ ಜೀವನದ ಪ್ರತಿಯೊಂದು ಯಶಸ್ಸಿನ ಕ್ಷಣದಲ್ಲಿ ನಮಗೆ ಆಶಿರ್ವಾದ ನೀಡಿ ಅವಳು ಮರೆತರೂ ನಾವು ಮರೆಯಲ್ಲ ಎಂಬ ಗೌರವಪೂರ್ವಕ ಕವನ ಇದು… ಧನ್ಯವಾದಗಳು ಹಾಗೂ ಗೌರವಪೂರ್ವಕವಾಗಿ ನಿಮ್ಮ ತಾಯಿಯವರ ಪಾದಗಳಲ್ಲಿ ನನ್ನ ಪ್ರಣಾಮಗಳು