ಶಹಾಬಾದ: ಲಾಕ್‌ಡೌನ್ ಸಂದರ್ಭದಲ್ಲಿ ಬಡಜನರಿಗೆ ಆಹಾರದ ಸಮಸ್ಯೆಯಾಗದಿರುವಂತೆ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಹೇಳಿದರು.
ಅವರು ತಾಲೂಕಿನ ಹೊನಗುಂಟಾ ಗ್ರಾಮದಲ್ಲಿ ಕೊರೊನಾ ವಾರಿಯರ‍್ಸ್ ಅವರಿಗೆ ಸೀರೆ ಮಾಸ್ ಹಾಗೂ ಬಡಜನರಿಗೆ ಆಹಾರ ಧಾನ್ಯಗಳನ್ನು ವಿತರಿಸಿ ಮಾತನಾಡಿದರು.
ಬೆಂಗಳೂರಿನಿಂದ ಹೆಚ್ಚು ಜನ ಕೂಲಿ ಕಾರ್ಮಿಕರು ಗ್ರಾಮಕ್ಕೆ ಆಗಮಿಸಿದ ಹಿನ್ನೇಲೆಯಲ್ಲಿ ಗ್ರಾಮದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದ್ದು, ಆಶಾ, ಅಂಗನವಾಡಿ ಕಾರ್ಯಕರ್ತರು ಕೂಲಿ ಕಾರ್ಮಿಕರ ಮನೆಗಳಿಗೆ ಹೋಗಿ ತಪಾಸಣೆ ನಡೆಸುತ್ತಿದ್ದಾರೆ. ಅವರ ಆರೋಗ್ಯ ದೃಷ್ಠಿಯಿಂದ ಆಶಾ, ಅಂಗನವಾಡಿ, ಗ್ರಾಮ ಪಂಚಾಯತಿ ಸಫಾಯಿ ಕರ್ಮಚಾರಿಗಳಿಗೆ ಮಾಸ್ಕ್, ಸೀರೆ, ಆಹಾರ ಧಾನ್ಯದ ಕಿಟ್ ವಿತರಿಸಲಾಯಿತು ಹೇಳಿದರು.
ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ಭೀಮುಗೌಡ, ಪೀರಪಾಶಾ, ಮಲ್ಕಣ್ಣ ಮುದ್ದಾ, ರುದ್ರಗೌಡ ಮಾಲಿಪಾಟೀಲ, ರಾಜು ಆಡಿನ್, ಶಿವಪ್ಪಾ ಬುರ್ಲಿ, ಮಾರ್ತಂಡ ಬುರ್ಲಿ, ಹಣಮಂತರಾವ,ಮಲ್ಲಿನಾಥ ಮೆತ್ರೆ, ಭೂತಾಳಿ ಪೂಜಾರಿ, ಸಂಗಣ್ಣ ಡಿಬ್ಬಣಿ ಪಾಲ್ಗೊಂಡಿದ್ದರು.