ಕಾಂಗ್ರೆಸ್‌ನಿಂದ ಸಂಸದ ಜಧವ್‌ಗೆ ಘೇರಾವ್: ಕಂಟೆನ್ಮೇಂಟ್ ಜೋನ್ ತೆರವಿನಲ್ಲೂ ರಾಜಕೀಯ

0
150

ಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಕಳೆದ ೨೮ ದಿನಗಳ ಹಿಂದೆ ಎರಡು ವರ್ಷದ ಮಗುವಿಗೆ ಕೊರೊನಾ ಸೋಂಕು ತಗುಲಿ ನಾಲ್ಕು ವಾರ್ಡ್‌ಗಳು ಕಂಟೆನ್ಮೇಂಟ್ ಜೋನ್ ಆಗಿ ಪರಿವರ್ತನೆಯಾಗಿದ್ದವು. ಮಗು ಗುಣಮುಖವಾಗಿ ಮನೆಗೆ ಬಂದಿದೆ. ಮೇ.೧೦ ರಂದು ಕಂಟೆನ್ಮೆಂಟ್ ಜೋನ್ ತೆರವು ಮಾಡಲು ಸಂಸದ ಡಾ.ಉಮೇಶ ಜಾಧವ ವಾಡಿ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಸಂಸದರ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಜೋನ್ ತೆರವಿಗೆ ಅಡ್ಡಿಪಡಿಸಿ ವಾಗ್ವಾದ ನಡೆಸಿದ ಪ್ರಸಂಗ ನಡೆಯಿತು.

ಕೊರೊನಾ ಸೋಂಕಿನ ಸಂಕಟದಲ್ಲಿ ಬಂದಿಯಾದ ಜನಗಳ ಕಷ್ಟಕ್ಕೆ ಸಂಸದ ಡಾ.ಉಮೇಶ ಜಾಧವ್ ಅವರು ನೆರವಾಗಲಿಲ್ಲ. ಸಮಸ್ಯೆ ಕೇಳಲು ಎಮ್ಮೆಯೂ ಬರಲಿಲ್ಲ. ಈಗ ಜೋನ್ ತೆರವು ಮಾಡಿ ಎಸಿಸಿ ಕಂಪನಿಯ ಲಾರಿಗಳ ಸಾಗಣಿಕೆಗೆ ಅನುಕೂಲ ಮಾಡಿಕೊಡಲು ಬಂದಿದ್ದಾರೆ. ಒಬ್ಬ ಪುರಸಭೆ ಮುಖ್ಯಾಧಿಕಾರಿ ಮಾಡಬಹುದಾದ ಕಂಟೆನ್ಮೆಂಟ್ ಜೋನ್ ತೆರವು ಕಾರ್ಯಕ್ಕೆ ಮಾನ್ಯ ಸಂಸದರು ಬಂದಿರುವುದು ನಾಚಿಕೆ ಗೇಡಿನ ಸಂಗತಿಯಾಗಿದೆ.

Contact Your\'s Advertisement; 9902492681

ಇಂತಹ ಸಂದರ್ಭದಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೇಮೂದ್ ಸಾಹೇಬ, ಪುರಸಭೆ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಸದಸ್ಯರಾದ ಶರಣು ನಾಟೀಕಾರ, ದೇವಿಂದ್ರ ಕರದಳ್ಳಿ, ಪೃಥ್ವಿರಾಜ ಸೂರ್ಯವಂಶಿ, ತಿಮ್ಮಯ್ಯ ಪವಾರ ಆಕ್ರೋಶ ವ್ಯಕ್ತಪಡಿಸಿದರು.

ಡಿವೈಎಸ್‌ಪಿ ವೆಂಕನಗೌಡ ಪಾಟೀಲ, ಸಿಪಿಐ ಪಂಚಾಕ್ಷರಿ ಸಾಲಿಮಠ ಹಾಗೂ ಪಿಎಸ್‌ಐ ದಿವ್ಯಾ ಮಹಾದೇವ್ ಅವರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ಕೆಲ ಸಮಯ ಪರಸ್ಪರ ತಳ್ಳಾಟ ನಡೆಯಿತು. ಕಾಂಗ್ರೇಸ್ ನಾಯಕರ ಪ್ರಶ್ನೆಗಳಿಗೆ ಯಾವೂದೇ ಪ್ರತಿಕ್ರಿಯೆ ನೀಡದ ಸಂಸದ ಜಾಧವ್, ಕಂಟೆನ್ಮೆಂಟ್ ಜೋನ್ ಗೇಟ್ ತೆರೆದರು. ಕಾಂಗ್ರೆಸ್ ಮುಖಂಡರಾದ ನಾಗೇಂದ್ರ ಜೈಗಂಗಾ, ಚಂದ್ರಸೇನ ಮೇನಗಾರ, ವಿಜಯಕುಮಾರ ಸಿಂಗೆ, ಮಹ್ಮದ್ ಅಶ್ರಫ್, ಭಶೀರ ಖುರೇಶಿ, ಶ್ರವಣಕುಮಾರ ಮೌಸಲಗಿ, ರಾಜಾ ಪಟೇಲ ಸೇರಿದಂತೆ ಕಾರ್ಯಕರ್ತರು ಜಾಧವ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು.

ಮಾಜಿ ಮಂತ್ರಿ, ಬಿಜೆಪಿಯ ಮುಖಂಡ ಮಾಲಿಕಯ್ಯ ಗುತ್ತೇದಾರ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಮಾಜಿ ಶಾಸಕ ವಾಲ್ಮೀಕಿ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಹಾಗೂ ಜಿಪಂ ಸ್ತಾಯಿ ಸಮಿತಿ ಅಧ್ಯಕ್ಷ ಅರವಿಂದ ಚವ್ಹಾಣ, ಬಸವರಾಜ ಪಂಚಾಳ, ವೀರಣ್ಣ ಯಾರಿ ಮತ್ತಿತರರು ಸಂಸದ ಜಾಧವ ಅವರೊಂದಿಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here