ಸುರಪುರ: ಅಹವiದಾಬಾದ್ ನಿಂದ ಬಂದ ಕೊರೊನಾ ಸೊಂಕಿತ ದಂಪತಿಗಳ ಮನೆ ಇರುವ ನಗರದ ಆಸರ ಮೊಹಲ್ಲಾವನ್ನು ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಿ ಮೊಹಲ್ಲಾಕ್ಕೆ ಹೋಗುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿಸಲಾಯಿತು.
ಈ ಸಂದರ್ಭದಲ್ಲಿದ್ದ ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಮಾತನಾಡಿ,ಕೊರೊನಾ ಸೊಂಕಿತರನ್ನು ಈಗಾಗಲೆ ಯಾದಗಿರಿ ಸರಕಾರಿ ಆಸ್ಪತ್ರೆಯ ಹೈ ಸೊಲೇಷನ್‍ಲ್ಲಿ ಇಡಲಾಗಿದೆ.ಅಲ್ಲದೆ ಇನ್ನುಳಿದ ಇಬ್ಬರನ್ನು ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನ ಕ್ವಾರೆಂಟೈನ್‍ಲ್ಲಿ ಇರಿಸಲಾಗಿದೆ.ಆದರೆ ಮುಂಜಾಗ್ರತೆಗಾಗಿ ಈ ಏರಿಯಾವನ್ನು ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲಾಗಿದ್ದು,ಜನರು ಮನೆಯಿಂದ ಹೊರ ಬರದೆ ಸಹಕರಿಸುವಂತೆ ಕರೆ ನೀಡಿದರು.
ಪೌರಾಯುಕ್ತ ಜೀವನ್ ಕುಮಾರ ಕಟ್ಟಿಮನಿ ಮಾತನಾಡಿ, ಕಂಟೋನ್ಮೆಂಟ್ ಘೋಷಣೆಯಾಗಿದ್ದರಿಂದ ಆಸರ ಮೊಹಲ್ಲಾಕೆ ಸಂಪರ್ಕವಿರುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ. ಜನರಿಗೆ ಅಗತ್ಯವಿರುವ ವಸ್ತುಗಳನ್ನು ಪಡೆಯಲು ನಗರಸಭೆಯಿಂದ ಕೆಲವೊಂದು ಮೊಬೈಲ್ ನಂಬರ್‍ಗಳನ್ನು ನೀಡಲಾಗುತ್ತಿದ್ದು,ಜನರು ಆ ನಂಬರ್‍ಗಳಿಗೆ ಕರೆ ಮಾಡಿ ತಮಗೆ ಬೇಕಾದ ವಸ್ತುವಿನ ಬಗ್ಗೆ ತಿಳಿಸಿದಲ್ಲಿ ಅವರ ಮನೆಗೆ ತಲುಪಿಸಲಾಗುವುದು.ಜನರು ಯಾವುದೆ ಕಾರಣಕ್ಕೂ ಅನಾವಶ್ಯಕವಾಗಿ ಹೊರಗೆ ಬರುವುದನ್ನು ನಿರ್ಬಂಧಿಸಲಾಗಿದೆ.ಕೇವಲ ಆರೋಗ್ಯದ ಸಮಸ್ಯ ಇರುವವರಿಗೆ ಮಾತ್ರ ಬರಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ,ಸುನೀಲ್ ನಾಯಕ,ಓಂಕಾರೆಪ್ಪ ಪೂಜಾರಿ,ರವಿ ನಾಯಕ ಸೇರಿದಂತೆ ಅನೇಕರಿದ್ದರು.