ಸುರಪುರ: ಕೊರೊನಾ ಸೊಂಕಿತ ಆಸರ ಮೊಹಲ್ಲಾ ಇನ್ನು ಕಂಟೋನ್ಮೆಂಟ್ ಝೋನ್

0
46

ಸುರಪುರ: ಅಹವiದಾಬಾದ್ ನಿಂದ ಬಂದ ಕೊರೊನಾ ಸೊಂಕಿತ ದಂಪತಿಗಳ ಮನೆ ಇರುವ ನಗರದ ಆಸರ ಮೊಹಲ್ಲಾವನ್ನು ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಿ ಮೊಹಲ್ಲಾಕ್ಕೆ ಹೋಗುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿಸಲಾಯಿತು.

ಈ ಸಂದರ್ಭದಲ್ಲಿದ್ದ ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಮಾತನಾಡಿ,ಕೊರೊನಾ ಸೊಂಕಿತರನ್ನು ಈಗಾಗಲೆ ಯಾದಗಿರಿ ಸರಕಾರಿ ಆಸ್ಪತ್ರೆಯ ಹೈ ಸೊಲೇಷನ್‍ಲ್ಲಿ ಇಡಲಾಗಿದೆ.ಅಲ್ಲದೆ ಇನ್ನುಳಿದ ಇಬ್ಬರನ್ನು ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನ ಕ್ವಾರೆಂಟೈನ್‍ಲ್ಲಿ ಇರಿಸಲಾಗಿದೆ.ಆದರೆ ಮುಂಜಾಗ್ರತೆಗಾಗಿ ಈ ಏರಿಯಾವನ್ನು ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲಾಗಿದ್ದು,ಜನರು ಮನೆಯಿಂದ ಹೊರ ಬರದೆ ಸಹಕರಿಸುವಂತೆ ಕರೆ ನೀಡಿದರು.

Contact Your\'s Advertisement; 9902492681

ಪೌರಾಯುಕ್ತ ಜೀವನ್ ಕುಮಾರ ಕಟ್ಟಿಮನಿ ಮಾತನಾಡಿ, ಕಂಟೋನ್ಮೆಂಟ್ ಘೋಷಣೆಯಾಗಿದ್ದರಿಂದ ಆಸರ ಮೊಹಲ್ಲಾಕೆ ಸಂಪರ್ಕವಿರುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ. ಜನರಿಗೆ ಅಗತ್ಯವಿರುವ ವಸ್ತುಗಳನ್ನು ಪಡೆಯಲು ನಗರಸಭೆಯಿಂದ ಕೆಲವೊಂದು ಮೊಬೈಲ್ ನಂಬರ್‍ಗಳನ್ನು ನೀಡಲಾಗುತ್ತಿದ್ದು,ಜನರು ಆ ನಂಬರ್‍ಗಳಿಗೆ ಕರೆ ಮಾಡಿ ತಮಗೆ ಬೇಕಾದ ವಸ್ತುವಿನ ಬಗ್ಗೆ ತಿಳಿಸಿದಲ್ಲಿ ಅವರ ಮನೆಗೆ ತಲುಪಿಸಲಾಗುವುದು.ಜನರು ಯಾವುದೆ ಕಾರಣಕ್ಕೂ ಅನಾವಶ್ಯಕವಾಗಿ ಹೊರಗೆ ಬರುವುದನ್ನು ನಿರ್ಬಂಧಿಸಲಾಗಿದೆ.ಕೇವಲ ಆರೋಗ್ಯದ ಸಮಸ್ಯ ಇರುವವರಿಗೆ ಮಾತ್ರ ಬರಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ,ಸುನೀಲ್ ನಾಯಕ,ಓಂಕಾರೆಪ್ಪ ಪೂಜಾರಿ,ರವಿ ನಾಯಕ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here