ಸುರಪುರ: ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎನ್.ಮುತ್ತಪ್ಪ ರೈ ನಿಧನಕ್ಕೆ ಸುರಪುರ ತಾಲೂಕು ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಶ್ರದ್ಧಾಂಜಲಿ ಅರ್ಪಿಸಿದರು.
ಬೆಳಿಗ್ಗೆ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಜಯಕರ್ನಾಟಕದ ಹಲವಾರು ಜನ ಮುಖಂಡರು ನಗರದ ಸಂಘದ ಕಚೇರಿ ಆವರಣದಲ್ಲಿ ಸೇರಿ ಎನ್.ಮುತ್ತಪ್ಪ ರೈ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ನಂತರ ಎರಡು ನಿಮಿಷಗಳ ಮೌನಾಚರಣೆ ನಡೆಸಿ ಸಂತಾಪ ಸೂಚಿಸಿದರು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ರವಿ ಕುಮಾರ ನಾಯಕ ಬೈರಿಮರಡಿ ಮಾತನಾಡಿ,ಮುತ್ತಪ್ಪ ರೈ ಅಣ್ಣನವರು ಈ ನಾಡು ಕಂಡ ಒಬ್ಬ ಧೀಮಂತ ಕನ್ನಡ ಹೋರಾಟಗಾರ.ಅವರು ಕನ್ನಡ ಮತ್ತು ಕನ್ನಡಿಗರ ವಿಷಯದಲ್ಲಿ ಸದಾಕಾಲ ಮುಂದಿರುತ್ತಿದ್ದ ಅವರು,ಜಯಕರ್ನಾಟಕ ಸಂಘಟನೆ ಹುಟ್ಟುಹಾಕಿ ನಮ್ಮಂತಹ ಲಕ್ಷಾಂತರ ಕನ್ನಡ ಅಭೀಮಾನದ ಮನಸ್ಸುಗಳಿಗೆ ನಾಡು ನುಡಿಯ ಸೇವೆ ಮಾಡಲು ತೊಡಗಿಸಿದ್ದರು.ಕೇವಲ ಹೋರಾಟ ಮಾತ್ರವಲ್ಲದೆ ನಾಡಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ,ಶಾಲೆಗಳ ಜಿರ್ಣೋಧ್ಧಾರ,ದೇವಸ್ಥಾನಗಳಿಗೆ ಸಹಾಯ ಹೀಗೆ ಹತ್ತು ಹಲವು ಜನಪರ ಕಾರ್ಯ ಮಾಡಿದವರು.
ಇಂದು ನಮ್ಮನ್ನೆಲ್ಲ ಬಿಟ್ಟು ಹೋಗಿ ಅನಾಥರನ್ನಾಗಿಸಿದ್ದಾರೆ.ಅವರ ಮಾರ್ಗದರ್ಶನದಂತೆ ನಾಡಿನ ಸೇವೆ ಮಾಡುವ ಮೂಲಕ ಅವರನ್ನು ಜನರ ಮನದಲ್ಲಿ ಜೀವಂತವಿರಿಸುವ ಕೆಲಸ ಮಾಡುವುದಾಗಿ ತಿಳಿಸಿದರು.ಅಲ್ಲದೆ ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡುವ ಜೊತೆಗೆ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಮಲ್ಲಪ್ಪ ನಾಯಕ ಕಬಾಡಗೇರಾ,ಶರಣಪ್ಪ ಬೈರಿಮಡಿ,ಯಲ್ಲಪ್ಪ ಕಲ್ಲೋಡಿ,ರವಿ ಹುಲಕಲ್,ರಾಘವೇಂದ್ರ ಗೋಗಿಕರ್,ಹಣಮಂತ ಶಿಬಾರಬಂಡಿ,ನಭೀ ಬೈರಿಮರಡಿ,ದೇವಪ್ಪ ಬಬಲಾದಿ,ಸಿದ್ದು ಕಾಡಂಗೇರಾ,ನಿಂಗಪ್ಪ ಹುಂಡೇಕಲ್ ಸೇರಿದಂತೆ ಅನೇಕರಿದ್ದರು.