ಕಲಬುರಗಿ: ಜಿಲ್ಲಾ ಆಯುಷ್ ಇಲಾಖೆ ಹಾಗೂ ಮಲಕರೆಡ್ಡಿ ಹೋಮಿಯೋಪತಿ ಕಾಲೇಜು ಇವುಗಳ ಸಹಯೋಗದೊಂದಿಗೆ ಕೋವಿಡ್-19 ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅರ್ಸೆನಿಕ್ ಅಲ್ಬಮ್ (Arsenic Album) ಹೋಮಿಯೋಪಥಿ ಔಷಧÀವನ್ನು ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್. ಸತೀಶಕುಮಾರ ಅವರ ಸಮ್ಮುಖದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಶುಕ್ರವಾರ ವಿತರಿಸಲಾಯಿತು.
ಅದೇ ರೀತಿ ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಸಮ್ಮುಖದಲ್ಲಿ ಅವರ ಕಚೇರಿಯ ಸಿಬ್ಬಂದಿಗಳಿಗೆ ಈ ಹೋಮಿಯೋಪಥಿ ಔಷಧಿಯನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಿರೀಜಾ ಎಸ್.ಯು, ಆಯುಷ್ ವಿಭಾಗೀಯ ನೊಡಲ್ ಅಧಿಕಾರಿ ಡಾ. ಪ್ರದೀಪ ಪಾಟೀಲ, ಹೋಮಿಯೋಪಥಿ ಕಾಲೇಜಿನ ಪ್ರಾಚಾರ್ಯ ಡಾ. ಸಂಪತ್ರಾವ್ ಹಾಗೂ ಡಾ. ರಿಯಾಜ್ ಸುಳ್ಳದ, ಡಾ. ಸುಧೀರ ಕುಳಗೇರಿ, ಡಾ. ಗುರುರಾಜ್ ಕುಲಕರ್ಣಿ, ಡಾ. ರಾಜೇಂದ್ರ ಅವರು ಉಪಸ್ಥಿತರಿದ್ದರು.