ಚಿತ್ತಾಪುರ: ಕೊರೊನ್ ವೈರಸ್ (ಕೋವಿಡ್ -19) ಲಾಕ್ ಡೌನ್ ಅವಧಿಯಲ್ಲಿ ಸಂಕಷ್ಟಕ್ಕೊಳಗಾದ ತಾಲೂಕಿನ ಹೂ ಬೆಳೆಯುವ ರೈತರಿಗೆ ಗರಿಷ್ಠ ಒಂದು ಹೇಕ್ಟರ್ ವರೆಗೆ 25 ಸಾವಿರ ರೂಪಾಯಿಗಳಂತೆ ಪರಿಹಾರಧನ ಕೊಡಲಾಗುವುದು ಒಂದು ಹೇಕ್ಟರ್ ಗಿಂತ ಕಡಿಮೆ ವಿಸ್ತೀರ್ಣದಲ್ಲಿನ ಹೂ ಬೆಳೆಗಾರರಿಗೆ ವಿಸ್ತೀರ್ಣಕ್ಕೆ ಅನುಗುಣವಾಗಿ ಪರಿಹಾರಧನ ಕೊಡಲಾಗುತ್ತದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಸಿದ್ದು ಅಣಬಿ ತಿಳಿಸಿದ್ದಾರೆ.
2019-20 ನೇ ಸಾಲಿನ ಬೆಳೆ ಸಮೀಕ್ಷೆ ಯಲ್ಲಿನ ಹೂ ಬೆಳೆಗಾರರ (ಬಹುವಾರ್ಷಿಕ ಹೂ ಬೆಳೆಗಳ ಮುಂಗಾರು ಬೆಳೆ ಸಮೀಕ್ಷೆ ಹಾಗೂ ವಾರ್ಷಿಕ ಹೂ ಬೆಳೆಗಳ ಹಿಂಗಾರು ಬೆಳೆ ಸಮೀಕ್ಷೆ) ದೃಢೀಕರಿಸಿದ ಪಟ್ಟಿಯನ್ನು ತಾಲೂಕು ಕಚೇರಿಯಲ್ಲಿ, ಮತ್ತು ರೈತ ಸಂಪರ್ಕ ಕೇಂದ್ರಗಳ ನಾಮಫಲಕಗಳಲ್ಲಿ ಪ್ರದರ್ಶಿಸಲಾಗುವುದು ಸದರಿ ಪಟ್ಟಿಯಲ್ಲಿರುವ ರೈತರು ಅರ್ಜಿ ಹಾಗೂ ದಾಖಲೆಗಳನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ, ಬೆಳೆ ಸಮೀಕ್ಷೆ ಪಟ್ಟಿಯಲ್ಲಿ ಇಲ್ಲದಿರುವ ಇತರೆ ರೈತರು ಬೆಳೆದಿದ್ದರೆ ಸಂಬಂಧಪಟ್ಟ ತಾಲೂಕಿನ ತೋಟಗಾರಿಕೆ ಕಚೇರಿಯಲ್ಲಿ ಅರ್ಜಿ ಪಡೆದು ನಿಗದಿತ ಅರ್ಜಿ ಹಾಗೂ ಅಗತ್ಯ ದಾಖಲೆಗಳ ಪಹಣಿ, ಆಧಾರ ಕಾರ್ಡ್, ರೈತರ ಬ್ಯಾಂಕ್ ಖಾತೆ ಪಾಸ್ಬುಕ್ ಪ್ರತಿ,
ಬೆಳೆಯ ಸ್ವಯಂ ದೃಢೀಕರಣದೊಂದಿಗೆ ಮೇ 28 2020ರ ಒಳಗಾಗಿ ತಾಲೂಕು ತೋಟಗಾರಿಕೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆೆ (ಮಾರ್ಚ್ 24 ನೇ ದಿನಾಂಕದ ನಂತರ ನಾಟಿ ಮಾಡಿರುವ ಹೂ ಬೆಳೆಗಾರರಿಗೆ ಸದರಿ ಯೋಜನೆಯಡಿ ಪರಿಹಾರಕ್ಕೆ ಪರಿಗಣಿಸಲು ಅವಕಾಶವಿರುವುದಿಲ್ಲ) ಜಗದೀಶ್ ಗರ್ಜೆ ತಾಂತ್ರಿಕ ಸಹಾಯಕರು ಚಿತ್ತಾಪುರ-9845224716. ಶಿವಪುತ್ರ ಪಾಟೀಲ್ ರೈತ ಸಂಪರ್ಕ ಕೇಂದ್ರ ಗುಂಡಗುರ್ತಿ- 9008385559. ಸಿದ್ದಲಿಂಗ ರೈತ ಸಂಪರ್ಕ ಕೇಂದ್ರ ಶಹಾಬಾದ್-9916334078.
ರೇಣುಕಾ ಕರದಾಳ ರೈತ ಸಂಪರ್ಕ ಕೇಂದ್ರ-9844907534.
ಸಿದ್ದು ಅಣಬಿ ರೈತ ಸಂಪರ್ಕ ಕೇಂದ್ರ ನಾಲವಾರ ಮತ್ತು ಕಾಳಗಿ- 9449004777. ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.