ಎರಡು ಕ್ವಾರಂಟೈನಕ್ಕೆ ಊಟದ ವ್ಯವಸ್ಥೆ: ಕೊಲ್ಲೂರು ಗ್ರಾಮ ಪಂಚಾಯತ್

0
31

ಚಿತ್ತಾಪುರ: ಕೊರೊನ್ ವೈರಸ್ ಹಿನ್ನೆಲೆ ಹೊರ ರಾಜ್ಯ, ಹೊರ ಜಿಲ್ಲೆಯಿಂದ ಆಗಮಿಸಿದ ವಲಸೆ ಕಾರ್ಮಿಕರಿಗೆ ತಾಲೂಕಿನ ಕೊಲ್ಲೂರು ಸರ್ಕಾರಿ ಪ್ರೌಢಶಾಲೆ, ಹಾಗೂ ಬಾಲಕರ ವಸತಿ ನಿಲಯದ ಎರಡು ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕೇಂದ್ರದಲ್ಲಿ 51 ಹೆಣ್ಣು, 67 ಗಂಡು ಒಟ್ಟು 118 ವಲಸೆ ಕಾರ್ಮಿಕರಿದ್ದಾರೆ.

ತಾಲೂಕು ಆಡಳಿತದ ಮೇರೆಗೆ ಕೊಲ್ಲೂರು ಗ್ರಾಮ ಪಂಚಾಯತ್ ವತಿಯಿಂದ ಎರಡು ಕ್ವಾರಂಟೈನ್ ಕೇಂದ್ರಗಳಿಗೆ ಪ್ರತಿದಿನ ಬೆಳಿಗ್ಗೆ ಉಪಹಾರ, ಮಧ್ಯಾಹ್ನ, ರಾತ್ರಿ, ಚಪಾತಿ ರೊಟ್ಟಿ ತರಕಾರಿ ಪಲ್ಯ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಹಾಗೂ ಅವರ ಸುರಕ್ಷತೆಗಾಗಿ ಅಗತ್ಯ ಸಾಮಗ್ರಿಗಳು ಮಾಸ್ಕ್ ಸ್ಯಾನಿಟೈಸರ್ ವಿತರಿಸಲಾಗಿದೆ, ಜೊತೆಗೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತ್ ಪಿಡಿಒ ಕಲ್ಲಪ್ಪ ಕುಂಬಾರ ಹಾಗೂ ಗ್ರಾಮ್ ಪಂಚಾಯತ್ ಅಧ್ಯಕ್ಷ ಕೃಷ್ಣರೆಡ್ಡಿ ಹಿರೆಡ್ಡಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here