ಚಿತ್ತಾಪುರ: ಕೊರೊನ್ ವೈರಸ್ ಹಿನ್ನೆಲೆ ಭಾರತ ಲಾಕ್ ಡೌನ್ ನಿಂದ ಕುಂಬಾರ ವೃತ್ತಿಯನ್ನು ಅವಲಂಬಿಸಿದವರ ಬದುಕು ಚಿಂತಾಜನಕವಾಗಿದ್ದು, ಈ ಸಮಯದಲ್ಲಿ ಕುಂಬಾರರಿಗೆ ಆರ್ಥಿಕವಾಗಿ ನೆರವು ಹಾಗೂ ಸರ್ಕಾರ ವತಿಯಿಂದ ಕಿಟ್ ವಿತರಿಸಬೇಕೆಂದು ರಾಜ್ಯ ಕುಂಬಾರರ ಯುವ ಸೈನ್ಯ ಸಂಸ್ಥಾಪಕ ರಾಜಾಧ್ಯಕ್ಷ ಜಗದೇವ ಎಸ್ ಕುಂಬಾರ ಒತ್ತಾಯಿಸಿದರು.
ಕುಂಬಾರಿಕೆ ಕೆಲಸವನ್ನೇ ನಂಬಿ ಜೀವನ ನಡೆಸುತ್ತಿರುವ ಕುಂಬಾರರು ಈ ವರ್ಷ ಬೇಸಿಗೆಯಲ್ಲಿ ಒಳ್ಳೆಯ ವ್ಯಾಪಾರ ಆಗುತ್ತಿತ್ತು ಆದ್ದರಿಂದ ವಿವಿಧ ಬಗೆಯ ಮಡಿಕೆಗಳನ್ನು ಮಾಡಿಟ್ಟುಕೊಂಡಿದ್ದಾರೆ, ಹಾಗೂ ಹೊರ ರಾಜ್ಯಗಳಿಂದ ವಿವಿಧ ಬಗೆಯ ಮಡಿಕೆಗಳನ್ನು ಹಣ ಖರ್ಚು ಮಾಡಿಕೊಂಡು ಮಡಿಕೆಗಳನ್ನು ತೆಗೆದುಕೊಂಡು ಬಂದಿದ್ದು. ಯುಗಾದಿ, ಮದುವೆ, ಹಬ್ಬಗಳ, ಇತರ ಕಾರ್ಯಕ್ರಮಗಳಲ್ಲಿ ಜೋರಾಗಿ ವ್ಯಾಪಾರ ನಡೆಯುತ್ತಿತ್ತು ಆದರೆ ಈ ವರ್ಷ ಕೊರೊನ ವೈರಸ್ ಲಾಕ್ ಡೌನ್ ನಿಂದಾಗಿ ಕುಂಬಾರಿಕೆ ಕೆಲಸ ಸಂಪೂರ್ಣವಾಗಿ ನಿಂತು ಹೋಗಿ ಈಗ ನಮ್ಮ ಪರಿಸ್ಥಿತಿ ಅದೋಗತಿಯಾಗಿದೆ, ಮಡಿಕೆ ಮಾಡಿ ಹೊಟ್ಟೆ ತುಂಬಿಕೊಳ್ಳುವ ಕುಂಬಾರರು ಪ್ರಾಣಬಿಡುವ ಪರಿಸ್ಥಿತಿಗೆ ಬಂದು ನಿಂತಿದೆ.
ಕೂಡಲೇ ಸರ್ಕಾರ ಕುಂಬಾರರಿಗೆ ಆರ್ಥಿಕವಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಹಾಗೂ ಸರ್ಕಾರನೇ ಕುಂಬಾರರಿಗೆ ಕಿಟ್ ಗಳನ್ನು ವಿತರಿಸಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಬಿ, ಎಸ್,ಯಡಿಯೂರಪ್ಪ ಅವರಿಗೆ ಬರೆದ ಮನವಿ ಪತ್ರವನ್ನು ತಾಲೂಕು ತಹಸೀಲ್ದಾರ್ ಉಮಾಕಾಂತ್ ಹಳ್ಳೆ ಅವರ ಮುಖಾಂತರ ಸಲ್ಲಿಸಿದರು.
ಈ ವೇಳೆಯಲ್ಲಿ ಶ್ರೀಮಂತ್ ಕುಂಬಾರ, ನೂರಂದಪ್ಪ ಕುಂಬಾರ, ಮಹಾದೇವಪ್ಪ ಕುಂಬಾರ, ಬಸವರಾಜ ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ರಮೇಶ್ ಕುಂಬಾರ್, ವಿಶ್ವನಾಥ್ ಕುಂಬಾರ್, ರಾಜು ಕುಂಬಾರ, ಸಿದ್ದಣ್ಣ ಕುಂಬಾರ್, ಸೇರಿದಂತೆ ಇತರರಿದ್ದರು.