ಸುರಪುರ: ನಗರದ ಅನೇಕ ದಿಗ್ಬಂಧನ ಕೇಂದ್ರಗಳಲ್ಲಿರುವ ವಲಸೆ ಕಾರ್ಮಿಕರು ತಾಲೂಕು ಆಡಳಿತದಿಂದ ನೀಡಲಾಗಿರುವ ಅನ್ನ ಸಾಂಬಾರ್ ಪಲ್ಯದ ಪಾಕೀಟ್ಗಳನ್ನು ತಿನ್ನದೆ ಎಸೆಯುವ ಮೂಲಕ ಆಹಾರ ವ್ಯರ್ಥ ಮಾಡುತ್ತಿರುವ ಘಟನೆ ನಡೆಯುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಕಷ್ಟ ನೀಗಿಸಿಕೊಳ್ಳಲೆಂದು ಬೇರೆಡೆಗೆ ವಲಸೆ ಹೋಗುವ ಜನರಲ್ಲಿ ಅನ್ನದ ಬಗ್ಗೆ ಚೆನ್ನಾಗಿ ಅರಿವಿರಲಿದೆ ಎಂದು ಎಲ್ಲರು ಅಂದುಕೊಳ್ಳುತ್ತಾರೆ. ಆದರೆ ಅದೇ ಕಷ್ಟ ಜೀವಿಗಳು ಹೀಗೆ ಅನ್ನವನ್ನು ಎಸೆಯುವ ಮೂಲಕ ತಾಲೂಕು ಆಡಳಿತರ ಶ್ರಮಕ್ಕೆ ಅಪಮಾನಿಸುತ್ತಿದ್ದಾರೆ.