ಕ್ವಾರಂಟೈನ್‌ಲ್ಲಿನ ಮಕ್ಕಳಿಗೆ ಹಣ್ಣು ಬಿಸ್ಕೆಟ್ ಕಿಟ್ ವಿತರಿಸಿದ ರಾಜಾ ಹನಮಪ್ಪ ನಾಯಕ

0
35

ಸುರಪುರ: ಇಂದು ಕೊರೊನಾ ವೈರಸ್ ಹಾವಳಿಯಿಂದ ಹಿರಿಯರು ಯುವಕರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಜನರು ತೊಂದರೆಗೆ ಸಿಲುಕಿದ್ದಾರೆ.ಇಂದು ತಮ್ಮ ಕಷ್ಟದ ಬದುಕಿಗಾಗಿ ಮಹಾರಾಷ್ಟ್ರ ಗೋವಾ ಮತ್ತಿತರೆಡೆಗೆ ಗುಳೆ ಹೋಗಿದ್ದವರನ್ನು ಕರೆದು ತಂದು ಕೊರೊನಾ ಸೊಂಕು ತಗುಲದಿರಲೆಂದು ಕ್ವಾರಂಟೈನಲ್ಲಿ ಇರಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ) ಮಾತನಾಡಿದರು.

ನಗರದ ವಿವಿಧ ವಸತಿ ನಿಲಯಗಳಲ್ಲಿ ತೆರೆಯಲಾದ ಕೊರೊನಾ ಕ್ವಾರಂಟೈನಲ್ಲಿರುವ ಮಕ್ಕಳಿಗೆ ರಾಜುಗೌಡ ಸೇವಾ ಸಮಿತಿ ನೇತೃತ್ವದಲ್ಲಿ ಹಣ್ಣು ಬಿಸ್ಕೆಟ್ ಹಾಗು ಬ್ರೇಡ್‌ಗಳ ಕಿಟ್ ವಿತರಿಸಿ ಮಾತನಾಡಿ,ಮಕ್ಕಳಿಗೆ ಬೆಳಗಾದರೆ ತಿನ್ನಲು ಉಪಹಾರ ಬೇಕಾಗಲಿದೆ.ತಾಲೂಕು ಆಡಳಿತದಿಂದ ಉಪಹಾರ ಬರುವುದು ಸ್ವಲ್ಪ ತಡವಾದರು ಮಕ್ಕಳಿಗೆ ಹಣ್ಣು ಬಿಸ್ಕೆಟ್ ಕೊಟ್ಟು ಹಸಿವನ್ನು ತಣಿಸಿ.ಮಕ್ಕಳು ಹಸಿವಿನಿಂದ ಇರುವುದನ್ನು ನೋಡಲಾಗದು.ಆದ್ದರಿಂದ ಕ್ವಾರಂಟೈನ್‌ಲ್ಲಿನ ಮಕ್ಕಳಿಗೆ ಕಿಟ್ ನೀಡುತ್ತಿರುವುದು ನೆಮ್ಮದಿ ತಂದಿದೆ ಎಂದರು.

Contact Your\'s Advertisement; 9902492681

ಎಲ್ಲಾ ಎಂಟು ಕ್ವಾರಂಟೈನಲ್ಲಿರುವ ಮಕ್ಕಳಿಗೆ ಸ್ವತಃ ತಾವೇ ಕಿಟ್ ನೀಡಿ ಮಕ್ಕಳಿಗೆ ಧೈರ್ಯ ತುಂಬಿದರು.ಈ ಸಂದರ್ಭದಲ್ಲಿ ಲಕ್ಷ್ಮೀಕಾಂತ ದೇವರಗೋನಾಲ,ಪರಶುರಾಮ ನಾಟೇಕಾರ್,ತಿಗಳಪ್ಪ ಕವಡಿಮಟ್ಟಿ,ಪ್ರವೀಣ ವಿಭೂತೆ,ಪವನ ವಿಭೂತೆ,ಚೇತನ್,ರಾಜು ದೇವರಗೋನಾಲ,ಮೌನೇಶ ಕೋನಾಳ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here