ಕಲಬುರಗಿ: ನೇಕಾರ ನಮ್ಮ ರಾಷ್ಟ್ರದ ಅತಿದೊಡ್ದ ಸಂಪನ್ಮೂಲ. ಪ್ರತಿಯೊಬ್ಬ ನೇಕಾರನ ಕೈಗೆ ಉದ್ಯೋಗ ಕಲ್ಪಿಸುವಂಥ ಹಾಗೂ ಅರ್ಥಿಕವಾಗಿ ಬಲಿಷ್ಟ ವಿಭಾಗದ ರೂಪ ತಾಳಲು, ನೇಕಾರರ ಹಕ್ಕುಗಳ್ಳನ್ನು ಕಾಪಾಡಲು ಮತ್ತು ಶೋಷಣೆ ತಡೆಯುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯವಾದಿ ಮತ್ತು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಜಾಗೃತಿ ಸಮಿತಿಯ, ಪ್ರಧಾನ ಕಾರ್ಯದರ್ಶಿಗಳಾದ ಜೆ ವಿನೋದ ಕುಮಾರ ಆಗ್ರಹಿಸಿದ್ದಾರೆ.
ಸಾಮಾಜಿಕ ಭದ್ರತೆ, ಮರು ಕೆಲಸಕ್ಕೆ ನೆರವು, ನಿರುದ್ಯೋಗ ಭತ್ಯೆ ಇತರೆ ವಿಷಯಗಳನ್ನು ಅಳವಡಿಸಲು ಆಯೋಗ ಸ್ಥಾಪಿಸಲು ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡು ಹೊಸ ನಾಂದಿ ಹಾಕಬೇಕು. ಕಲ್ಯಾಣ ರಾಜ್ಯ ಕಡೆಗೆ ನಮ್ಮ ನಡಿಗೆ ಎಂಬ ಸಂದೇಶ ರಾಜ್ಯ ಸರಕಾರ ಸಾರಬೇಕು ಎಂದು ಒತ್ತಾಯಿಸಿದ್ದಾರೆ.