ಶುಲ್ಕ ರಹಿತ ಶಿಕ್ಷಣ ನೀಡಲು ಸಿಎಂಗೆ ಎಐಡಿಎಸ್‍ಒ ಪತ್ರ

0
51

ವಾಡಿ: ಮಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ಘೋಷಿಸಲಾದ ಲಾಕ್‍ಡೌನ್ ಫಜೀತಿಯಲ್ಲಿ ಸಿಕ್ಕು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಸರಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಶುಲ್ಕವನ್ನು ಸರಕಾರವೇ ಭರಿಸಬೇಕು. ಸಂಕಟದ ವರ್ಷದಲ್ಲಿ ಬಡ ವಿದ್ಯಾರ್ಥಿಗಳಿಗೆ ಶುಲ್ಕ ರಹಿತ ಶಿಕ್ಷಣ ನೀಡಬೇಕು ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಒ) ಸರಕಾರವನ್ನು ಆಗ್ರಹಿಸಿದೆ.

ಮೇ.26 ರಂದು ಎಐಡಿಎಸ್‍ಒ ರಾಜ್ಯ ಸಮಿತಿ ಕರೆ ಕೊಟ್ಟ ಅಖಿಲ ಕರ್ನಾಟಕ ಆಗ್ರಹ ದಿನಕ್ಕೆ ಸ್ಪಂದಿಸಿದ ಸ್ಥಳೀಯ ಎಐಡಿಎಸ್‍ಒ ಮುಖಂಡರು, ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ನಾಲವಾರ ಉಪ ತಹಶೀಲ್ದಾರ ವೆಂಕನಗೌಡ ಪಾಟೀಲ ಅವರಿಗೆ ಸಲ್ಲಿಸುವ ಮೂಲಕ ಶೈಕ್ಷಣಿಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

Contact Your\'s Advertisement; 9902492681

ವಿಶ್ವವಿದ್ಯಾಲಯಗಳ ಪರೀಕ್ಷಾ ಶುಲ್ಕವನ್ನು ರದ್ದುಪಡಿಸಬೇಕು. ಈಗಾಗಲೇ ಪಡೆದಿರುವ ಶುಲ್ಕವನ್ನು ಹಿಂದಿರುಗಿಸಬೇಕು. ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು. ಎಲ್ಲಾ ವರ್ಗದ ವಿದ್ಯಾರ್ಥಿಗಳ ಶಿಷ್ಯವೇತನ ಹೆಚ್ಚಿಸಬೇಕು. ಸರಕಾರಿ ಹಾಸ್ಟೆಲ್‍ಗಳ ಅನುದಾನ ಹೆಚ್ಚಿಸಿ, ಶೈಕ್ಷಣಿಕ ವರ್ಷದ ಆರಂಭದಲ್ಲೇ ಸೌಕರ್ಯಗಳನ್ನು ಒದಗಿಸಬೇಕು. ಆನ್‍ಲೈನ್ ತರಗತಿಗಳ ಆಧಾರದ ಮೇಲೆ ಪರೀಕ್ಷೆ ನಡೆಸಬಾರದು. ಪರೀಕ್ಷೆಯ ರೂಪರೇಷಗಳನ್ನು ಶಿಕ್ಷಣ ತಜ್ಞರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಪ್ರಜಾತಾಂತ್ರಿಕವಾಗಿ ರೂಪಿಸಬೇಕು ಎಂದು ಒತ್ತಾಯಿಸಿದರು.

ಎಐಡಿಎಸ್‍ಒ ನಗರ ಸಮಿತಿ ಅಧ್ಯಕ್ಷ ಗೌತಮ ಪರತೂರಕರ, ಕಾರ್ಯದರ್ಶಿ ವೇಂಕಟೇಶ ದೇವದುರ್ಗ, ವಿದ್ಯಾರ್ಥಿ ನಾಯಕ ಅರುಣಕುಮಾರ ಹಿರೆಬಾನರ್ ನಿಯೋಗದಲ್ಲಿ ಇದ್ದರು. ಶೈಕ್ಷಣಿಕ ಬೇಡಿಕೆಗಳನ್ನು ಬರೆಯಲಾಗಿದ್ದ ಬಿತ್ತಿಪತ್ರಗಳನ್ನು ಮನೆಯಿಂದಲೇ ಪ್ರದರ್ಶಿಸುವ ಮೂಲಕ ನೂರಾರು ವಿದ್ಯಾರ್ಥಿಗಳು ಫೇಸ್‍ಬುಕ್ ಹಾಗೂ ವ್ಯಾಟ್ಸ್ಯಾಪ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ ಮೂಲಕ ಆನ್‍ಲೈನ್ ಪ್ರತಿಭಟನೆ ನಡೆಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here