ವಾಡಿ: ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ವರ್ಷ ಜೂ.5 ರಂದು ವಾಡಿ ಪಟ್ಟಣದಲ್ಲಿ ಕಾರುಣ್ಣಿ ನಿಮಿತ್ತ ನಡೆಯಬೇಕಿದ್ದ ರೈತರ ಕರಿ ಹರಿಯುವ ಸಾಂಪ್ರದಾಯಿಕ ಆಚರಣೆ ರದ್ದುಪಡಿಸಲಾಗಿದೆ.
ಜೀವ ಕಂಟಕ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ಜನರ ಜೀವ ಸುರಕ್ಷತೆಯ ಹಿತದೃಷ್ಠಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಎತ್ತು, ಎಮ್ಮೆಗಳ ಮೆರವಣಿಗೆ ನಿಷೇಧಿಸಲಾಗಿದೆ. ಪರಿಣಾಮ ರೈತರು, ಸಾರ್ವಜನಿಕರು ಕಾರಹುಣ್ಣಿಮೆ ದಿನದಂದು ಗುಂಪುಗುಂಪಾಗಿ ಬೀದಿಗಿಳಿಯಬಾರದು.
ಕಾನೂನು ಮೀರಿ ಆಚರಣೆಗೆ ಮುಂದಾದರೆ ಅಂಥಹವರ ವಿರುದ್ಧ 144 ಸೆಕ್ಷೆನ್ ನಿಷೇಧಾಜ್ಞೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಪಿಎಸ್‍ಐ ವಿಜಯಕುಮಾರ ಭಾವಗಿ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.