ಕೊರೊನಾ ಕರ್ತವ್ಯದ ಆಶಾಗಳಿಗೆ ಪ್ರೋತ್ಸಾಹ ಧನಕ್ಕೆ ಒತ್ತಾಯ

0
37

ವಾಡಿ: ಕೊರೊನಾ ಸೋಂಕು ದೃಢಪಟ್ಟ ಪಟ್ಟಣದ ಸೀಲ್ಡೌನ್ ಹಾಗೂ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಕಳೆದ ಎರಡು ತಿಂಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳೀಯ ಆಶಾ ಕಾರ್ಯಕರ್ತೆಯರಿಗೆ ವಿಶೇಷ ಪ್ರೋತ್ಸಾಹ ಧನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ)ಗೆ ಸಂಯೋಜಿತ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘ ಒತ್ತಾಯಿಸಿದೆ.

ಈ ಕುರಿತು ಬುಧವಾರ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ, ವಾಡಿ ವಲಯ ಸೇಕ್ಟ್ರಲ್ ಮ್ಯಾಜಿಸ್ಟ್ರೀಟ್ ವಿಠ್ಠಲ ಹಾದಿಮನಿ ಅವರಿಗೆ ಮನವಿ ಸಲ್ಲಿಸಿರುವ ಆಶಾ ಕಾರ್ಯಕರ್ತೆಯರು, ಅಗತ್ಯವಿರುವಷ್ಟು ಮಾಸ್ಕ್, ಸ್ಯಾನಿಟೈಸರ್ ಹಾಗೂ ಕೊಡೆಗಳನ್ನು ವಿತರಿಸಬೇಕು ಮತ್ತು ವಿಶೇಷ ಪ್ರೋತ್ಸಾಹ ಧನ, ಆಹಾರದ ಕಿಟ್ ವಿತರಿಸುವ ಮೂಲಕ ತಮ್ಮನ್ನು ಲಾಕ್‍ಡೌನ್ ಸಂಕಷ್ಟದಿಂದ ಪಾರುಮಾಡಬೇಕು ಎಂದು ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಕೋರೋನಾ ಸೋಂಕಿನ ಕುರಿತು ಅರಿವು ಮೂಡಿಸಲು ಪ್ರತಿ ನಿತ್ಯ ಆಶಾ ಕಾರ್ಯಕರ್ತೆಯರು ವಾಡಿ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಸೂಕ್ತ ಸುರಕ್ಷಾ ಸಾಮಗ್ರಿಗಳನ್ನು ವಿತರಿಸುವ ಅವಶ್ಯಕತೆಯಿದೆ. ಕೋರೋನಾ ವೈರಸ್ಸನ್ನು ತಡೆಗಟ್ಟವ ನಿಟ್ಟಿನಲ್ಲಿ ಅದರ ಸರ್ವೆ ನಡೆಸಲು ಹಾಗೂ ಹೊರರಾಜ್ಯದಿಂದ ಬಂದಿರುವ ನಾಗರಿಕರನ್ನು ಮನೆ ಮನೆಯಲ್ಲಿ ಗುರುತಿಸಿ ಮಾಹಿತಿಯನ್ನು ಸಂಗ್ರಹಿಸಲು ಆಶಾ ಕಾರ್ಯಕರ್ತೆಯರನ್ನು ನೇಮಿಸಲಾಗಿದೆ. ಆಶಾ ಕಾರ್ಯಕರ್ತೆಯರು ಇಂತಹ ಒಂದು ವಿಶೇಷ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ, ಈ ರೋಗಾಣು ಹರಡುವಿಕೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಪುರಸಭೆ ಆಡಳಿತ ವಿಶೇಷ ಪ್ರೋತ್ಸಾಹ ಧನ ಮಂಜೂರು ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನಗರ ಸಂಚಾಲಕ ಶರಣು ಹೇರೂರ ಆಗ್ರಹಿಸಿದ್ದಾರೆ.

ಆಶಾ ಕಾರ್ಯಕತೆರ್ಯರಾದ ಆಶಾ ರಾಠೋಡ, ಮಾಣಿಕ್ಯಮ್ಮ, ರೇಣುಕಾ, ಶಿವಲೀಲಾ ಆರ್.ಹಡಪದ, ಶಾಂತಾಬಾಯಿ, ರತ್ನಾಬಾಯಿ ಸೇರಿದಂತೆ ವಿವಿಧ ವಾರ್ಡ್‍ಗಳ ಆಶಾ ಕಾರ್ಯಕರ್ತೆಯರು ಮನವಿ ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here