ಸುರಪುರ: ಲಾರಿ,ಟಂ ಟಂ,ಪಿಕಪ್‌ನಂತಹ ವಾಹನಗಳ ಮೇಲೆ ಜನರನ್ನು ಸಾಗಿಸುವುದು ಕಂಡು ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ನಗರ ಠಾಣೆ ಆರಕ್ಷಕ ನಿರೀಕ್ಷಕ (ಪಿಐ) ಆನಂದರಾವ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು,ಲಾರಿ,ಟಂ ಟಂ,ಪಿಕಪ್‌ನಂತಹ ವಾಹನಗಳ ಟಾಪಲ್ಲಿ ಜನರನ್ನು ಕೂಡಿಸಿ ವಾಹನ ಚಲಾಯಿಸಲಾಗುತ್ತಿದೆ.ಇದರಿಂದ ಅಪಾಯಗಳು ಎದುರಾಗಲಿವೆ ಅಲ್ಲದೆ ಅಪಘಾತಕ್ಕೂ ಕಾರಣವಾಗಲಿದೆ.ಅಲ್ಲದೆ ಸರಕು ಸಾಗಾಣಿಕೆಯೆಂದು ಪರವಾನಿಗೆ ಪಡೆದು ಜನರನ್ನ ಸಾಗಿಸುವುದು ಅಪರಾಧವಾಗಲಿದೆ.ಟಂ ಟಂಗಳಲ್ಲಿ ಪರವಾನಿಗೆಯಂತೆ ಜನರನ್ನು ಸಾಗಿಸಬೇಕು,ಆದರೆ ಅನೇಕ ಚಾಲಕರು ಟಂ ಟಂ ಮೇಲೆಯೂ ಜನರನ್ನು ಕೂಡಿಸಿ ಚಲಾಯಿಸುವುದು ಕಂಡು ಬಂದಿದೆ,ಅಂತಹ ಚಾಲಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವದು.ಯಾವುದೆ ಕಾರಣಕ್ಕು ವಾಹನಗಳ ಮೇಲೆ ಜನರನ್ನು ಕೂಡಿಸಿ ವಾಹನ ಚಲಾಯಿಸದೆ ಪರವಾನಿಗೆ ಪಡೆದಷ್ಟು ಸೀಟುಗಳನ್ನ ಮಾತ್ರ ಹಾಕಿ ಚಲಾವಣೆ ಮಾಡುವುದು ಸುರಕ್ಷಿತವಾದುದು,ಹೆಚ್ಚಿನ ಸಂಖ್ಯೆಯ ಜನರನ್ನು ಕೂಡಿಸಿ ಚಲಾಯಿಸಿದ್ದು ಕಂಡು ಬಂದರೆ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.