ಕಲಬುರಗಿ: ಸಾಹಿತಿ ಮಹಾಂತಪ್ಪ ನಂದೂರ ಅವರು ಅಕ್ಕ ನಾಗಮ್ಮನ ಜೀವನೇತಿಹಾಸ ಕುರಿತು ಬರೆದ ಸಾನೆಟ್ ರೂಪದ ಕೃತಿ ಅರಿವೇ ಪ್ರಮಾಣು ಕೃತಿ ಜನಾರ್ಪಣೆ ಕಾರ್ಯಕ್ರಮವನ್ನು ನಗರದ ಜಿಲ್ಲಾ ವಿಜ್ಞಾನ ಕೇಂದ್ರದ ನೂತನ ಸಭಾಂಗಣದಲ್ಲಿ ಮೇ ೨೬ರಂದು ಬೆಳಗ್ಗೆ ೧೦.೪೫ಕ್ಕೆ ಹಮ್ಮಿಕೊಳ್ಳಲಾಗಿದೆ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ ತಿಳಿಸಿದ್ದಾರೆ.
ನಾಡಿನ ಖ್ಯಾತ ಲೇಖಕ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಕೃತಿ ಜನಾರ್ಪಣೆ ಮಾಡಲಿದ್ದು, ಕೃತಿ ಕುರಿತು ಡಾ. ವಿಕ್ರಮ ವಿಸಾಜಿ ಮಾತನಾಡಲಿದ್ದಾರೆ. ಗುಲ್ಬರ್ಗ ವಿವಿ ಪ್ರಸಾರಾಂಗದ ನಿರ್ದೇಶಕ ಡಾ. ಎಚ್.ಟಿ. ಪೋತೆ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಆಶಯ ನುಡಿಗಳನ್ನಾಡಲಿದ್ದಾರೆ. ಬಿ.ಎಚ್. ನಿರಗುಡಿ ಉಪಸ್ಥಿತರಿರುವರು ಎಂದು ಅವರು ತಿಳಿಸಿದ್ದಾರೆ.