ಜೆಪಿ.ಕಾರ್ಮಿಕರ ಮೂರು ದಿನವ ವೇತನ ಕಡಿತ: ಕಾರ್ಮಿಕರಿಂದ ಧರಣಿ

0
23

ಶಹಾಬಾದ: ನಗರದ ಜೆಪಿ ಸಿಮೆಂಟ್ ಕಾರ್ಖಾನೆಯ ಆಡಳಿತ ಮಂಡಳಿ ಕರೊನಾ ನೆಪ ಮಾಡಿಕೊಂಡು ಕಾರ್ಮಿಕರ ಮೂರು ದಿನದ ವೇತನವನ್ನು ಮತ್ತು ಮುಂದಿನ ಹತ್ತು ತಿಂಗಳು ಕಡಿತಗೊಳಿಸುವ ಕ್ರಮವನ್ನು ವಿರೋಧಿಸಿ ಕಾರ್ಮಿಕರು ಆಡಳಿತ ಕಚೇರಿ ಮುಂದೆ ಧರಣಿ ನಡೆಸಿ, ಪ್ರತಿಭಟಿಸಿದರು.

ಕಾರ್ಮಿಕ ಸಂಘದ ಅಧ್ಯಕ್ಷ ಮಹ್ಮದ ಉಬೇದುಲ್ಲಾ ನೇತೃತ್ವದಲ್ಲಿ ಕಾರ್ಮಿಕರು ಬೆಳಗ್ಗೆ ಆಡಳಿತ ಕಚೇರಿಯ ಮುಂದೆ ಆಡಳಿತ ಮಂಡಳಿ ಕ್ರಮವನ್ನು ವಿರೋಧಿಸಿ, ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ವಿಷಯ ತಿಳಿದ ತಾಲೂಕ ತಹಶೀಲ್ದಾರ ಸುರೇಶ ವರ್ಮಾ ಸ್ಥಳಕ್ಕೆ ಆಗಮಿಸಿದರು. ಕಾರ್ಮಿಕರು ಕರೊನಾ ಲಾಕ್ ಡೌನ ಹಿನ್ನೇಲೆಯಲ್ಲಿ ಮೊದಲನೆ ತಿಂಗಳು ವೇತನದ ಶೇ.೨೫ ರಷ್ಟು ಕಡಿತಗೊಳಿಸಿತ್ತು. ವಿರೋಧದ ನಂತರವು ಎರಡನೆ ತಿಂಗಳು ಶೇ.೨೫ ರಷ್ಟು ವೇತನ ಕಡಿತಗೊಳಿಸಿ, ಹಿಂದಿನ ತಿಂಗಳು ಕಡಿತಗೊಳಿಸಿದ್ದ ಶೇ.೨೫ ವೇತನ ನೀಡಿದ್ದರು. ಈಗ ಮುಂದಿನ ೧೦ ತಿಂಗಳ ಪ್ರತಿ ತಿಂಗಳು ಮೂರು ದಿನನ ವೇತನ ಕಡಿತಗೊಳಿಸುವ ನೋಟಸ್ ಹಾಕಲಾಗಿದೆ ಎಂದು ಕಾರ್ಮಿರು ತಹಶೀಲ್ದಾರರ ಮುಂದೆ ಸಮಸ್ಯೆಯನ್ನು ಹೇಳಿದರು.

Contact Your\'s Advertisement; 9902492681

ಆಡಳಿತ ಮಂಡಳಿ ಡಿಜಿಎಮ್ ರಾಜೀಬ್ ಗೋಯಿಲ್ ಆಡಳಿತ ಮಂಡಳಿಯ ನಿರ್ಧೇಶನಂದತೆ ಕಡಿಗೊಳಿಸಲಾಗುತ್ತಿದ್ದು, ಕಾರ್ಮಿಕರ ನಿಲುವು ಕುರಿತು ಆಡಳಿತ ಮಂಡಳಿಗೆ ಮಾಹಿತಿ ನೀಡಲಾಗುವದು ಎಂದು ತಿಳಿಸಿದರು. ಇದಕ್ಕೆ ಒಪ್ಪದ ಕಾರ್ಮಿಕರು ನೋಟಿಸ್ ಹಿಂಪಡೆಯುವವರೆಗೂ ಧರಣಿ ಮುಂದುವರೆಸುವದಾಗಿ ಪಟ್ಟು ಹಿಡಿದರು.

ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ ತಹಶೀಲ್ದಾರರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹರಿಸಲು ತಿಳಿಸಿದರು. ಆಡಳಿತ ಮಂಡಳಿಯ ಮನವಿಯಂತೆ ಶುಕ್ರವಾರ ಮಧ್ಯಾಹ್ನದವರೆಗೆ ಅಂತಿಮ ನಿರ್ಣಯ ಕೈಗೊಳ್ಳುವದಾಗಿ ಪಿಐ ಬಿ.ಅಮರೇಶ ಅವರಿಗೆ ಆಡಳಿತ ಮಂಡಳಿ ಮಾಹಿತಿ ನೀಡಿದ್ದರಿಂದ ಪಿಐ ಅವರ ಮನವಿ ಮೆರೆಗೆ ಗುರುವಾರ ತಾತ್ಕಾಲಿಕ ಧರಣಿ ಹಿಂದಕ್ಕೆ ಪಡೆದಿದ್ದು, ಶುಕ್ರವಾರ ಬೆಳಗ್ಗೆ ಮುಂದುವರೆಸುವದಾಗಿ ಕಾರ್ಮಿಕ ಸಂಘದ ಅಧ್ಯಕ್ಷ ಉಬೇದುಲ್ಲಾ ಪತ್ರಿಕೆಗೆ ಮಾಹಿತಿ ನೀಡಿದರು.

ಧರಣಿಯಲ್ಲಿ ಕಾರ್ಮಿಕ ಸಂಘದ ಮಾರುತಿ ಅಕುಸಖಾನ್, ರವಿ ಪಾಗದ, ಅಯ್ಯೂಬ್ ಖಾನ್, ಧರ್ಮರಾಜ ಗೌಡ, ಶಂಕರ ಚವ್ಹಾಣ ಸೇರಿದಂತೆ ಕಾರ್ಮಿಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here