ಚಿಂಚೋಳಿ: ರಟಕಲ್ ಗ್ರಾಮದಲ್ಲಿ ಇಂದು ಶ್ರೀ ರಾಮ ಸೇನೆಯ ವತಿಯಿಂದ ಚೀನಾ ದೇಶದ ವಸ್ತುಗಳನ್ನು ಬಹಿಷ್ಕಾರ ಹಾಕಿ ಎಂದು ಹೋರಾಟ ನಡೆಸುವ ಮೂಲಕ ಕಾರ್ಯಕರ್ತರು ಒತ್ತಾಯಿಸಿದರು.
ಚೀನಾ ವಸ್ತುಗಳನ್ನು ಬಹಿಸ್ಕರಿಸೋಣ ಯಾರು ಇನ್ನೂ ಮುಂದೆ ಉಪಯೋಗಿಸಬೇಡಿ ದೇಶದ ವೀರ ಸೈನಿಕರನ್ನು ಕೊಂದಿದ ದೇಶದ ಜೊತೆಗೆ ಯಾವುದೇ ರೀತಿಯ ವ್ಯವಹಾರ ಬೇಡ ಭಾರತದ ಸೈನಿಕರು ದೇಶದ ಜೀವ ಎಂಬ ಸಂದೇಶ ಚಿನ್ನಾಕ್ಕೆ ರವಾನಿಸಬೇಕಾಗಿದೆ ಎಂದು ಕಾರ್ಯಕರ್ತರು ಆಗ್ರಹಿಸಿರು.
ಈ ವೇಳೆಯಲ್ಲಿ ಚೀನಾ ಅಧ್ಯಕ್ಷನ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಮ ಸೇನೆ ಅಧ್ಯಕ್ಷ ರಾಜಶೇಖರ ಹಂದ್ರೋಳ್ಳಿ, ಉಪಾಧ್ಯಕ್ಷ ಶಂಕರ ಚೋಕಾ, ಶಿವು ಮುಕರಂಬಿ, ವಿಶಾಲ ,ಗುಂಡು ಗುತ್ತಿಗೆದಾರ, ಮಲ್ಲು ಮರಗುತ್ತಿ , ರಾಕೇಶ್ ಸುಲೇಪೇಟ ಪ್ರಶಾಂತ್ ಕಂಠಿ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.