ಕೊರೊನಾ ಲಗ್ಗೆ: ಇ- ಮೀಡಿಯಾ ಲೈನ್ ಕವಿತೆ

0
69
ಕೊರೊನಾ ಲಗ್ಗೆ

 

ಕೊರೊನಾ ಕಾಣದ
ವೈರಸ್ ಜಗತ್ತನ್ನೇ
ಬೆಚ್ಚಿ ಬೀಳಿಸಿ ತಲ್ಲಣಗೊಳಿಸಿ
ಅಟ್ಟಹಾಸ ಮೆರೆಯುತಿದೆ
ಇದಕ್ಕೆ  ಅಂತ್ಯವಿಲ್ಲವೇ ?
ಚೀನಾದವರ ಪ್ರಯೋಗದಲಿ
ಜನಮನದಲಿ ನೆಮ್ಮದಿಯ
ನಿಟ್ಟುಸಿರಿನಲಿ ಬದುಕುವ
ಜೀವಕೆ ಎಷ್ಟೊಂದು ತ್ರಾಣ
ಇದಕ್ಕೆ ಅಂತ್ಯವಿಲ್ಲವೇ?
ಸಾವು ನೋವುಗಳ
ಹೆಣಗಳ ರಾಶಿ ರಾಶಿ
ಭಯ ಭೀತಿಗೊಂಡ ಜನಶಕ್ತಿ
ಹೌಹಾರಿ ಮಸುಕು ಧರಿಸಿದರೂ
ಇದಕ್ಕೆ ಅಂತ್ಯವಿಲ್ಲವೇ ?
ಸೂರ್ಯ-ಚಂದ್ರ ಉದಯಿಸಿದಿನಿಂದ
ಮಂದಿರ ಮಸೀದಿ ಚಚ್೯ ದೇವಾಲಯ
ಪ್ರಾರ್ಥನಾ ಕೇಂದ್ರಗಳು ತೆರೆದಿತ್ತು
ನಿನ್ನ ರೌದ್ರವತಾರಕೆ ಲಾಕ್ಡೌನ್ನಾದವು
ಇದಕ್ಕೆ ಅಂತ್ಯವಿಲ್ಲವೇ ?
ಚಪ್ಪಾಳೆ ಹೊಡೆದ್ದದಾಯಿತು
ಕತ್ತಲಾಗಿಸಿ ದೀಪ ಹಚ್ಚಿದ್ದಾಯಿತು
ಆ ಜಾತಿ ಈ ಜಾತಿಯ ವೈಷಮ್ಯ ಕಟ್ಟಿದ್ದಾಯಿತು ಮತ ಧರ್ಮ ನಡುವೆ  ಕೋಮು ಮಾಡಿದ್ದಾಯಿತು
ಇದಕ್ಕೆ ಅಂತ್ಯವಿಲ್ಲವೇ ?
ಮನುಷ್ಯರಲ್ಲಿ ಅಂತರವಾಯಿತು
ಶೀಲ್ಡಡೌನ್ ಮಾಡಿಯೂ
ಮನೆಯಲ್ಲಿದ್ದು ಕೆಲಸ ಕಾರ್ಯ
ಆರ್ಥಿಕ ದಿವಾಳಿತನದಲಿ ಬಿದ್ದಾಯಿತು
ಇದಕ್ಕೆ ಅಂತ್ಯವಿಲ್ಲವೇ ?
ದಿನದಿಂದ ದಿನಕರ ಉಲ್ಬಣವಾಗಿ
ದಿಲ್ಲಿಯಿಂದ ಹಳ್ಳಿಯವರೆಗೆ
ಹೊತ್ತು ಉರಿಯುತಿದೆ ಕೊರೊನಾ
ಪರಿಸರ ಸಂಸ್ಕೃತಿ ನಾಡಲ್ಲಿ ತೆರೆ ಕಾಣದೇ
ಇದಕ್ಕೆ ಅಂತ್ಯವಿಲ್ಲವೇ ?????

Contact Your\'s Advertisement; 9902492681
       -ವಿಜಯಲಕ್ಷಿ ಕೌಟಗೆ, ಬೀದರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here