ಬಿಸಿ ಬಿಸಿ ಸುದ್ದಿಕಲೆ-ಕ್ರೀಡೆಸಾಹಿತ್ಯ ಕೊರೊನಾ ಲಗ್ಗೆ: ಇ- ಮೀಡಿಯಾ ಲೈನ್ ಕವಿತೆ ಮೂಲಕ emedialine - June 22, 2020 0 68 Facebook Twitter Pinterest WhatsApp ಕೊರೊನಾ ಲಗ್ಗೆ ಕೊರೊನಾ ಕಾಣದ ವೈರಸ್ ಜಗತ್ತನ್ನೇ ಬೆಚ್ಚಿ ಬೀಳಿಸಿ ತಲ್ಲಣಗೊಳಿಸಿ ಅಟ್ಟಹಾಸ ಮೆರೆಯುತಿದೆ ಇದಕ್ಕೆ ಅಂತ್ಯವಿಲ್ಲವೇ ? ಚೀನಾದವರ ಪ್ರಯೋಗದಲಿ ಜನಮನದಲಿ ನೆಮ್ಮದಿಯ ನಿಟ್ಟುಸಿರಿನಲಿ ಬದುಕುವ ಜೀವಕೆ ಎಷ್ಟೊಂದು ತ್ರಾಣ ಇದಕ್ಕೆ ಅಂತ್ಯವಿಲ್ಲವೇ? ಸಾವು ನೋವುಗಳ ಹೆಣಗಳ ರಾಶಿ ರಾಶಿ ಭಯ ಭೀತಿಗೊಂಡ ಜನಶಕ್ತಿ ಹೌಹಾರಿ ಮಸುಕು ಧರಿಸಿದರೂ ಇದಕ್ಕೆ ಅಂತ್ಯವಿಲ್ಲವೇ ? ಸೂರ್ಯ-ಚಂದ್ರ ಉದಯಿಸಿದಿನಿಂದ ಮಂದಿರ ಮಸೀದಿ ಚಚ್೯ ದೇವಾಲಯ ಪ್ರಾರ್ಥನಾ ಕೇಂದ್ರಗಳು ತೆರೆದಿತ್ತು ನಿನ್ನ ರೌದ್ರವತಾರಕೆ ಲಾಕ್ಡೌನ್ನಾದವು ಇದಕ್ಕೆ ಅಂತ್ಯವಿಲ್ಲವೇ ? ಚಪ್ಪಾಳೆ ಹೊಡೆದ್ದದಾಯಿತು ಕತ್ತಲಾಗಿಸಿ ದೀಪ ಹಚ್ಚಿದ್ದಾಯಿತು ಆ ಜಾತಿ ಈ ಜಾತಿಯ ವೈಷಮ್ಯ ಕಟ್ಟಿದ್ದಾಯಿತು ಮತ ಧರ್ಮ ನಡುವೆ ಕೋಮು ಮಾಡಿದ್ದಾಯಿತು ಇದಕ್ಕೆ ಅಂತ್ಯವಿಲ್ಲವೇ ? ಮನುಷ್ಯರಲ್ಲಿ ಅಂತರವಾಯಿತು ಶೀಲ್ಡಡೌನ್ ಮಾಡಿಯೂ ಮನೆಯಲ್ಲಿದ್ದು ಕೆಲಸ ಕಾರ್ಯ ಆರ್ಥಿಕ ದಿವಾಳಿತನದಲಿ ಬಿದ್ದಾಯಿತು ಇದಕ್ಕೆ ಅಂತ್ಯವಿಲ್ಲವೇ ? ದಿನದಿಂದ ದಿನಕರ ಉಲ್ಬಣವಾಗಿ ದಿಲ್ಲಿಯಿಂದ ಹಳ್ಳಿಯವರೆಗೆ ಹೊತ್ತು ಉರಿಯುತಿದೆ ಕೊರೊನಾ ಪರಿಸರ ಸಂಸ್ಕೃತಿ ನಾಡಲ್ಲಿ ತೆರೆ ಕಾಣದೇ ಇದಕ್ಕೆ ಅಂತ್ಯವಿಲ್ಲವೇ ????? Contact Your\'s Advertisement; 9902492681 -ವಿಜಯಲಕ್ಷಿ ಕೌಟಗೆ, ಬೀದರ