ಸಮಾಜ ಮುಖಿಜ್ಞಾನಿ ಮಡಿವಾಳ ಮಾಚಿ ದೇವರು

0
224

ಕಲಬುರಗಿ: ಮಡಿವಾಳ ಕಾಯಕದ ಮಾಚಿದೇವರು ಕೇವಲ ಮಲಿನವಾದ ಬಟ್ಟೆಗಳನ್ನಷ್ಟೇ ತೊಳೆಯದೇ ಮಲಿನವಾದ ಮನಸನ್ನೂ ಸಹ ತೊಳೆಯುತ್ತಿದ್ದರು.ಕೊಳಕಾದ ಬಟ್ಟೆ ತೊಳೆಯುವುದಕ್ಕಿಂತ ಕೊಳಕಾದ ಮನಸನ್ನು ತೊಳೆಯುವುದು ಬಹಳ ದೊಡ್ಡ ಕೆಲಸ. ಬಟ್ಟೆಗಳನ್ನು ಸಾಮಾನ್ಯವಾಗಿಎಲ್ಲರೂಸ್ವಚ್ಚ ಇಟ್ಟುಕೊಳ್ಳುತ್ತಾರೆ. ಆದರೆ ಮನಸನ್ನು ನಿರ್ಮಲವಾಗಿಟ್ಟುಕೊಳ್ಳುವುದು ಕಷ್ಟದ ಕೆಲಸ ಶರಣರು ಮಾಡಿದ್ದಾರೆ.

ಇಲ್ಲಿನ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಲಿಂ. ನಾರಾಯಣರಾವ್ ಮುಕ್ಕಾ ಹಾಗೂ ಲಿಂ.ಬಿ. ಮಹಾದೇವಪ್ಪ ಸ್ಮರಣಾರ್ಥ ಅರಿವಿನ ಮನೆ ೬೩೨ ನೆಯ ದತ್ತಿ ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿ ದೇವರ ಗಣಾಚಾರ ನಿಷ್ಠೆ”ಕುರಿತು ಅನುಭಾವ ನೀಡುತ್ತಾ ಮಾತನಾಡಿದ ಅರ್ಥಶಾಸ್ತ್ರದ ಸಹ ಪ್ರಾಧ್ಯಾಪಕರಾದಡಾ. ಟಿ. ಆರ್. ಗುರುಬಸಪ್ಪನವರು ಮಡಿವಾಳ ಮಾಚಿದೇವ ವೀರಗಣಾಚಾರಿಯಾಗಿದ್ದಲ್ಲದೆ ಶುದ್ಧ ಸಾತ್ವಿಕ ತೇಜಸ್ಸಿನ ಅನುಭಾವಿಯೂ ಹೌದು ಮತ್ತು ವಿದ್ವಾಂಸರೂಆಗಿದ್ದುದುನಮಗೆ ಅವರ ವಚನಗಳಿಂದ ತಿಳಿದು ಬರುತ್ತದೆ.ಅವರೊಬ್ಬ ಸ್ವಾಭಿಮಾನದ ಸಿಂಹದ ಮರಿಯಾಗಿದ್ದರು.ಲಿಂಗಾಯತಧರ್ಮದಲ್ಲಿ ಬರುವ ಪಂಚಾಚಾರಗಳಲ್ಲಿ ಗಣಾಚಾರವನ್ನುತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆಕಲ್ಯಾಣವಾಗುವ, ಹಿತವಾಗುವ ಲಿಂಗ ಸಿದ್ಧಾಂತಕ್ಕೆ ನಿಷ್ಠೆಯನ್ನುತೋರುತ್ತಾಅದಕ್ಕಾಗಿತಮ್ಮಜೀವನವನ್ನು ಮುಡಿಪ್ಪಾಗಿಟ್ಟುಕೊಂಡಿದ್ದರು.ಯೋಗ್ಯವಾದುದನ್ನು ಅಳವಡಿಸಿಕೊಂಡು ಅಂತೆಯೇಅದಕ್ಕಾಗಿ ಹೋರಾಡುವುದುಗಣಾಚಾರವೆನಿಸುತ್ತದೆ.

Contact Your\'s Advertisement; 9902492681

ವೇದ, ಆಗಮಗಳಲ್ಲಿ ಬರುವಅಪ್ರಸ್ತುತ ವಿಚಾರಗಳನ್ನು ಮಡಿವಾಳ ಮಾಚಿದೇವತಮ್ಮ ವಚನಗಳಲ್ಲಿ ಖಂಡಿಸುತ್ತಾರೆ.ಪುಸ್ತಕದಜ್ಞಾನಆತ್ಮಜ್ಞಾನಕ್ಕೆ ಸಾಟಿಯಾಗದು.ಆತ್ಮಜ್ಞಾನಅನುಭಾವದ ಸಂಪತ್ತು.ಈ ಸಂಪತ್ತುದೊರೆಯುವುದು ಸಾಧನೆಯಿಂದ.ನಮ್ಮನ್ನು ನಾವು ಅರಿಯದೆ ಹೊರಗಿನ ಪುಸ್ತಕ ಜ್ಞಾನದಿಂದಇದನ್ನು ಸಾಧಿಸುವುದು ಕಷ್ಟ ಎಂಬುದು ಮಾಚಿದೇವರ ನಿಲುವು.ಅವರುತಮ್ಮ ಮತ್ತೊಂದು ವಚನದಲ್ಲಿ ಹುಟ್ಟದ ಬೀಜವಿದ್ದೊಡೇನಯ್ಯಾ ಧರೆಯೊಳಗೆ, ಅಟ್ಟುಣ್ಣಬಾರದ ಮಡಕೆಯಿದ್ದರೇನಯ್ಯಮನೆಯೊಳಗೆ, ಶಿವಾ ನಿಮ್ಮ ಮುಟ್ಟದ ಮನವಿರ್ದೊಡೇನಯ್ಯ, ತನುವಿನೊಳಗೆ ಎನ್ನುತ್ತಾರೆ.ಈ ದೇಹದೊಳಗೆ ಶಿವನನ್ನು ಅರಿಯದ ಮನಸಿದ್ದರೆ ಅದು ವ್ಯರ್ಥಎಂದು ಹೇಳುತ್ತಾರೆ.ಕೆಚ್ಚಲು ಕಚ್ಚಿದಉಣ್ಣೆಬಲ್ಲುದೆಕ್ಷೀರದರುಚಿಯಎಂದು ಉಪಮೆ ಕೊಟ್ಟು ಶಿವನನ್ನು ಅರಿಯದ ಮನಸು ಉಣ್ಣೆಯಂತೆಎನ್ನುತ್ತಾರೆ.ಒಡಲು ಪಡೆದ ಮೇಲೆ ಶಿವಜ್ಞಾನವನರಿಯದವನ ಬಾಳು ನಿರರ್ಥಕವೆಂದು ಹೇಳುತ್ತಾರೆ.ಸತ್ಯದ ಪ್ರತಿಪಾದನೆಗಾಗಿ ನಿಷ್ಠುರವಾಗಿ ನಡೆದುಕೊಳ್ಳುವಗುಣ ಮಡಿವಾಳ ಮಾಚಿದೇವರಲ್ಲಿತ್ತು.

ಅಧ್ಯಕ್ಷತೆ ವಹಿಸಿ ಮಾತನಾಡಿದಡಾ. ಬಿ. ಡಿಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದಡಾ. ವೀರಣ್ಣದಂಡೆಯವರು ಬಸವಣ್ಣನವರಜೊತೆಗೆ ಹೆಗಲೆಣೆಯಾಗಿ ನಿಂತಂತಹ ಪ್ರಮುಖರೆಂದರೆಚೆನ್ನಬಸವಣ್ಣ, ಅಲ್ಲಮಪ್ರಭು, ಮಡಿವಾಳ ಮಾಚಿದೇವರು.ಶರಣ ಸಂಘಟನೆಯಲ್ಲಿ ನೂತನ ಸಮಾಜ ನಿರ್ಮಾಣದಲ್ಲಿ ಬಸವಣ್ಣನವರೊಡನೆ ಈ ಪ್ರಮುಖರುಕಂಡು ಬರುತ್ತಾರೆ.ಬಸವಣ್ಣ ಮತ್ತು ಮಡಿವಾಳ ಮಾಚಿದೇವರಲ್ಲಿತುಂಬಾಅನ್ಯೋನ್ಯತೆಯಿತ್ತುಎಂದರು.

ವೇದಿಕೆ ಮೇಲೆ ಕಲಬುರ್ಗಿ ಬಸವ ಸಮಿತಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ, ಉಪಾಧ್ಯಕ್ಷರಾದಡಾ.ಜಯಶ್ರೀದಂಡೆ ಹಾಗೂ ದತ್ತಿ ದಾಸೋಹಿಗಳಾದ ಶ್ರೀ ರಮೇಶ ಮುಕ್ಕಾ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಹೆಚ್.ಕೆ.ಉದ್ದಂಡಯ್ಯಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here