ಸುರಪುರ: ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ದಿ: ರಾಜಾ ಕೃಷ್ಣಪ್ಪ ನಾಯಕ ಜಹಾಗೀರದಾರ್ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಕೊರೊನಾ ನಿರ್ಮೂಲನೆಗಾಗಿ ಶ್ರಮಿಸುವ ಸೈನಿಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜಾ ವೆಂಕಟಪ್ಪ ನಾಯಕ ಜಹಾಗಿರದಾರ್,ಇಂದು ಕೊರೊನಾ ವೈರಸ್ ಹಾವಳಿ ಜಗತ್ತನ್ನು ನಡುಗಿಸಿದೆ.ನಿತ್ಯವು ಸಾವಿರಾರು ಜನರು ಸಾಯುತ್ತಿದ್ದಾರೆ.ಲಕ್ಷಾಂತರ ಜನರು ಸೊಂಕಿನಿಂದ ಬಳಲುತ್ತಿದ್ದಾರೆ.ಇಂತಹ ಅಪಾಯದ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಹಗಲಿರಳು ಜನರಿಗಾಗಿ ಸೇವೆ ಮಾಡುತ್ತಿರುವ ಕೊರೊನಾ ಸೈನಿಕರ ಸೇವೆ ಅವಿಸ್ಮರಣಿಯವಾಗಿದೆ ಎಂದರು.
ಇದೇ ಸಂದರ್ಭಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು,ಆಶಾ ಕಾರ್ಯಕರ್ತೆಯರು,ಗ್ರಾಮ ಪಂಚಾಯತ್ ಸಿಬ್ಬಂದಿ,ಆರೋಗ್ಯ ಇಲಾಖೆ ಸಿಬ್ಬಂದಿ ಹಾಗು ಸ್ವಚ್ಛತಾ ಕರ್ಮಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮದ ತಿಪ್ಪಣ್ಣ ಮರಾಠ,ಹಮಿರುದ್ದಿನ್ ಹುಡೆದ್,ಮಲ್ಲಿಕಾರ್ಜುನ ಹಡಪದ,ಅಂಬ್ರೇಶ ಸಾಹುಕಾರ,ಅಂಬ್ರೇಶ ಹಚ್ಚರಡ್ಡಿ,ಮಹ್ಮದಸಾಬ್ ಪರಸನಹಳ್ಳಿ ಸೇರಿದಂತೆ ಅನೇಕರಿದ್ದರು.